ಸಾರಾಂಶ
‘ಬಾಹುಬಲಿ’ ಖ್ಯಾತಿಯ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಟನೆ ಮಾಡಲಿದ್ದು ₹30 ಕೋಟಿ ಸಂಭಾವನೆ ಪಡೆದು ದಾಖಲೆ ನಿರ್ಮಿಸಿದ್ದಾರೆ. ‘ಕಲ್ಕಿ’ ಚಿತ್ರಕ್ಕೆ ದೀಪಿಕಾ ಪಡುಕೋಣೆ ₹20 ಕೋಟಿ ಪಡೆದು ನಿರ್ಮಿಸಿದ್ದ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ

ರಾಜಮೌಳಿ ಅವರ ಬಹುನಿರೀಕ್ಷಿತ ಹೊಸ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ನಾಯಕಿ. ಈ ಸುದ್ದಿಯನ್ನು ಪ್ರಿಯಾಂಕಾ ಅವರೇ ಅಧಿಕೃತಗೊಳಿಸಿದ್ದಾರೆ. ಈ ಮೂಲಕ ಹಾಲಿವುಡ್‌ನಲ್ಲಿ ಬ್ಯುಸಿ ಆಗಿದ್ದ ಪ್ರಿಯಾಂಕಾ ಸಾಕಷ್ಟು ವರ್ಷಗಳ ಬಳಿಕ ಇಂಡಿಯನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
‘ಎಸ್‌ಎಸ್‌ಎಂಬಿ 29’ ಹೆಸರಿನ ಈ ಪ್ರಾಜೆಕ್ಟ್ 2025ರ ಏಪ್ರಿಲ್ ವೇಳೆಗೆ ಟೇಕಾಫ್ ಆಗಲಿದೆ.
ಇದು ಆಫ್ರಿಕನ್ ಕಾಡಿನಲ್ಲಿ ನಡೆಯುವ ಪ್ಯಾನ್ ವರ್ಲ್ಡ್ ಜಂಗಲ್ ಅಡ್ವೆಂಚರ್ ಸಿನಿಮಾ ಎನ್ನಲಾಗಿದೆ. ಸದ್ಯ ಈ ಸಿನಿಮಾದ ಸ್ಕ್ರಿಪ್ಟ್ ವರ್ಕ್ ಮುಕ್ತಾಯದ ಹಂತದಲ್ಲಿದೆ.
ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಈ ಅಡ್ವೆಂಚರ್ ಥ್ರಿಲ್ಲರ್‌ನ ಹೀರೋ. 2026 ವರ್ಷಾಂತ್ಯದವರೆಗೆ ಈ ಸಿನಿಮಾ ಶೂಟಿಂಗ್ ನಡೆಯಲಿದ್ದು, 2027ರಲ್ಲಿ ತೆರೆಗೆ ಬರಲಿದೆ ಎನ್ನಲಾಗಿದೆ. ಆಫ್ರಿಕನ್ ಕಾಡುಗಳ ಜೊತೆಗೆ ಅಮೆರಿಕಾ, ಭಾರತದ ವಿವಿಧ ಸ್ಟುಡಿಯೋಗಳಲ್ಲಿ ಶೂಟಿಂಗ್ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.