ಬಾಲಿವುಡ್‌ನತ್ತ ಪ್ರಿಯಾಂಕಾ ಉಪೇಂದ್ರ ಸೆಪ್ಟೆಂಬರ್‌ 21 ಸಿನಿಮಾಕ್ಕೆ ನಾಯಕಿ

| N/A | Published : May 05 2025, 12:04 PM IST

Priyanka Upendra
ಬಾಲಿವುಡ್‌ನತ್ತ ಪ್ರಿಯಾಂಕಾ ಉಪೇಂದ್ರ ಸೆಪ್ಟೆಂಬರ್‌ 21 ಸಿನಿಮಾಕ್ಕೆ ನಾಯಕಿ
Share this Article
  • FB
  • TW
  • Linkdin
  • Email

ಸಾರಾಂಶ

ನಟಿ ಪ್ರಿಯಾಂಕಾ ಉಪೇಂದ್ರ ‘ಸೆಪ್ಟೆಂಬರ್‌ 21’ ಸಿನಿಮಾ ಮೂಲಕ ಬಾಲಿವುಡ್‌ನತ್ತ ಪ್ರಯಾಣ ಬೆಳೆಸುತ್ತಿದ್ದಾರೆ.

 ಸಿನಿವಾರ್ತೆ : ನಟಿ ಪ್ರಿಯಾಂಕಾ ಉಪೇಂದ್ರ ‘ಸೆಪ್ಟೆಂಬರ್‌ 21’ ಸಿನಿಮಾ ಮೂಲಕ ಬಾಲಿವುಡ್‌ನತ್ತ ಪ್ರಯಾಣ ಬೆಳೆಸುತ್ತಿದ್ದಾರೆ.

ಬೆಂಗಳೂರು ಮೂಲದ ಆಲ್ಝೈಮರ್ ರೋಗಿ ಮತ್ತು ಆತನ ಆರೈಕೆ ಮಾಡುವ ನರ್ಸ್‌ವೊಬ್ಬಳ ಕಥೆ ಇರುವ ‘ಸೆಪ್ಟೆಂಬರ್‌ 21’ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

22 ವರ್ಷದ ಕನ್ನಡತಿ ಕರೆನ್ ಕ್ಷಿತಿ ಸುವರ್ಣ ಈ ಸಿನಿಮಾದ ನಿರ್ದೇಶಕಿ.

ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ಕಮಲಾ ಎಂಬ ಶುಶ್ರೂಷಕಿಯಾಗಿ ಕಾಣಿಸಿಕೊಂಡರೆ, ಬಾಲಿವುಡ್‌ನ ಪ್ರವೀಣ್ ಸಿಂಗ್ ಸಿಸೋಡಿಯಾ ಸ್ಮರಣಶಕ್ತಿ ಕಳೆದುಕೊಂಡು ಖಿನ್ನತೆಯಿಂದ ಬಳಲುತ್ತಿರುವ 60 ವರ್ಷದ ರಾಜ್‌ಕುಮಾರ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜರೀನಾ ವಹಾಬ್ ಮತ್ತು ಅಮಿತ್ ಬೆಹ್ಲ್ ಸಹ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ನಾನಾ ಪಾಟೇಕರ್ ಸೋದರಳಿಯ ಸಚಿನ್ ಪಾಟೇಕರ್ ನಟಿಸಿದ್ದಾರೆ.

‘ರೋಗಿಯ ಆರೈಕೆ ಮಾಡುವ ಮಹಿಳೆಯ ಹೋರಾಟಗಳು, ಕಾಯಿಲೆಯನ್ನು ನಿಭಾಯಿಸುವಾಗ ಎದುರಾಗುವ ಸವಾಲುಗಳು, ಎಲ್ಲವನ್ನೂ ತ್ಯಜಿಸಿ ರೋಗಿಯ ಗುಣವಾಗುವಿಕೆಗೆ ಕೆಲಸ ಮಾಡುವವಳಾಗಿ ಆಕೆಯ ತ್ಯಾಗವನ್ನು ಈ ಚಿತ್ರದಲ್ಲಿ ಹೇಳುತ್ತಿದ್ದೇವೆ. ಪ್ರಿಯಾಂಕಾ ಉಪೇಂದ್ರ ಇಂಥದ್ದೊಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಶೂಟಿಂಗ್‌ ಪ್ರಗತಿಯಲ್ಲಿದೆ. ಸಿದ್ಧವಾದ ಬಳಿಕ ಇದನ್ನು ಅಂತಾರಾಷ್ಟ್ರೀಯ ಸಿನಿಮೋತ್ಸವಗಳ ಸ್ಫರ್ಧಾ ವಿಭಾಗದಲ್ಲಿ ಪ್ರದರ್ಶಿಸಲಾಗುವುದು. ಬಳಿಕ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆ ಮಾಡುತ್ತೇವೆ’ ಎಂದು ನಿರ್ದೇಶಕಿ ಕರೆನ್ ಹೇಳುತ್ತಾರೆ.

ಕರೆನ್‌ ಈಗಾಗಲೇ ‘ ಹೈಡ್ ಅಂಡ್ ಸೀಕ್’ ಎಂಬ ಕಿರುಚಿತ್ರ ನಿರ್ದೇಶಿಸಿದ್ದು, ಇದು ಕಾನ್‌ ಸಿನಿಮೋತ್ಸವ ಸೇರಿ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.

ಈ ಸಿನಿಮಾವನ್ನು ಬೆಲ್ಜಿಯಂ ಮೂಲದ ನಿರ್ಮಾಣ ಸಂಸ್ಥೆ ಫಾಕ್ಸ್ ಆನ್ ಸ್ಟೇಜ್ ಬೆಲ್ಜಿಯಂನ ಫ್ರೆಡ್ರಿಕ್ ಡಿ ವೋಸ್ , ರಿಲಯನ್ಸ್ ಎಂಟರ್‌ಟೈನ್‌ಮೆಂಟ್‌ನ ಮಾರ್ಕೆಟಿಂಗ್ ಉಪಾಧ್ಯಕ್ಷ ಅಮಿತ್ ಅವಸ್ಥಿ ಜೊತೆಗೆ ವಿಸಿಕಾ ಫಿಲ್ಮ್ಸ್ ಮತ್ತು ಫಿಲ್ಮ್ಸ್ ಮ್ಯಾಕ್ಸ್ಜಂ ನಿರ್ಮಿಸುತ್ತಿವೆ.