ಸುಮುಖ ಪ್ರೊಡಕ್ಷನ್‌ ಎರಡನೇ ಸಿನಿಮಾ ‘ಕಜ್ಜ’ ಕ್ಕೆ ಮುಹೂರ್ತ

| Published : Apr 24 2025, 11:48 PM IST

ಸುಮುಖ ಪ್ರೊಡಕ್ಷನ್‌ ಎರಡನೇ ಸಿನಿಮಾ ‘ಕಜ್ಜ’ ಕ್ಕೆ ಮುಹೂರ್ತ
Share this Article
  • FB
  • TW
  • Linkdin
  • Email

ಸಾರಾಂಶ

ಸುಮುಖ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಮೂಡಿಬರಲಿರುವ ಎರಡನೇ ಸಿನಿಮಾ ‘ಕಜ್ಜ’ ಇದರ ಮುಹೂರ್ತ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಿತು. ಸಿನಿಮಾಕ್ಕೆ ನಿರ್ಮಾಪಕ ವಿಶಾಂತ್ ಮಿನೇಜಸ್ ಕ್ಲಾಪ್ ಮಾಡಿದರು. ಸಿನಿಮಾಕ್ಕೆ ವಿಜಯಕುಮಾರ್ ಕೊಡಿಯಲ್ ಬೈಲ್, ಅರವಿಂದ ಬೋಳಾರ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸುಮುಖ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಮೂಡಿಬರಲಿರುವ ಎರಡನೇ ಸಿನಿಮಾ ‘ಕಜ್ಜ’ ಇದರ ಮುಹೂರ್ತ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಿತು. ಸಿನಿಮಾಕ್ಕೆ ನಿರ್ಮಾಪಕ ವಿಶಾಂತ್ ಮಿನೇಜಸ್ ಕ್ಲಾಪ್ ಮಾಡಿದರು. ಸಿನಿಮಾಕ್ಕೆ ವಿಜಯಕುಮಾರ್ ಕೊಡಿಯಲ್ ಬೈಲ್, ಅರವಿಂದ ಬೋಳಾರ್ ಚಾಲನೆ ನೀಡಿದರು.ಬಳಿಕ ಮಾತಾಡಿದ ಫಾದರ್ ಮೆಲ್ವಿನ್ ಪಿಂಟೊ ಎಸ್. ಜೆ. ಸುಮುಖ ಪ್ರೊಡಕ್ಷನ್‌ ಮೊದಲ ಸಿನಿಮಾಕ್ಕೆ ತುಳುನಾಡಿನ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ತುಡರ್‌ ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದು ಮುಂದಿನ ಸಿನಿಮಾ ಕೂಡಾ ಜನರು ಮೆಚ್ಚಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಒಳ್ಳೆಯ ತಂಡ ಸಿನಿಮಾದಲ್ಲಿ ದುಡಿಯುತ್ತಿದ್ದು ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಈ ಬಾರಿ ಇನ್ನಷ್ಟು ಮನೋರಂಜನೆ ನೀಡಲು ಉತ್ಸಾಹಿ ಯುವಕರ ತಂಡ ಸಜ್ಜಾಗಿದೆ ಎಂದರು.ಬಳಿಕ ಮಾತಾಡಿದ ಅರವಿಂದ ಬೋಳಾರ್ ‘ಕಜ್ಜ’ ಅಂದರೆ ತುಳುವಿನಲ್ಲಿ ಕಾರ್ಯ ಎಂದರ್ಥ. ಒಂದೊಳ್ಳೆಯ ಕಾರ್ಯವನ್ನು ಮಾಡಲು ನಾವೆಲ್ಲ ಒಂದಾಗಿದ್ದೇವೆ. ಹಿಂದಿನ ಸಿನಿಮಾಕ್ಕೆ ಕೊಟ್ಟಷ್ಟೇ ಪ್ರೋತ್ಸಾಹ ಪ್ರೀತಿಯನ್ನು ಈ ಬಾರಿಯೂ ಕೊಡುವ ಮೂಲಕ ಹೊಸಬರ ತಂಡವನ್ನು ಪ್ರೋತ್ಸಾಹಿಸಿ ಎಂದರು.ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ಕಜ್ಜ ಸಿನಿಮಾದ ಕತೆ ಚೆನ್ನಾಗಿದೆ. ಉತ್ತಮ ಕಲಾವಿದ್ದಾರೆ. ಹೊಸಬರಿಗೂ ಅವಕಾಶ ನೀಡಿದ್ದಾರೆ. ತುಡರ್ ಸಿನಿಮಾದಂತೆ ಕಜ್ಜ ಸಿನಿಮಾ ಕೂಡಾ ಜಯಭೇರಿ

ಬಾರಿಸಲಿ ಎಂದರು. ಪ್ರದೀಪ್ ಕುಮಾರ್ ಕಲ್ಕೂರ, ಸಾಯಿರಾಂ, ರವಿಶಂಕರ್ ಮಿಜಾರ್, ರಮಾನಂದ ಪೂಜಾರಿ ಬೋಳಾರ್, ಉದಯ ಪೂಜಾರಿ ಬಲ್ಲಾಲ್ ಭಾಗ್, ಶಾಹಿನ್ ಶೇಖ್, ಪ್ರೇಮ್ ಶೆಟ್ಟಿ ಸುರತ್ಕಲ್, ಹರೀಶ್ ಶೆಟ್ಟಿ, ಸಿನಿಮಾದ ನಟ ನಿರ್ದೇಶಕ ಸಿದ್ಧಾರ್ಥ್‌ ಶೆಟ್ಟಿ, ಉಮೇಶ್‌ ಮಿಜಾರ್‌, ಸದಾಶಿವ ಅಮೀನ್‌, ವೆನ್ಸಿಟಾ ಡಯಾಸ್‌, ಲಂಚುಲಾಲ್, ಮೋಹನ್ ಕೊಪ್ಪಳ, ಬಾಲಕೃಷ್ಣ ಶೆಟ್ಟಿ, ರೂಪ ವರ್ಕಾಡಿ, ಮೋಹನ್ ರಾಜ್, ಅರತಿ ಶೆಟ್ಟಿ ಮತ್ತಿತರರು ಇದ್ದರು.ಸಿನಿಮಾದಲ್ಲಿ ಸಿದ್ಧಾರ್ಥ್‌ ಶೆಟ್ಟಿ, ಅರವಿಂದ ಬೋಳಾರ್, ಉಮೇಶ್ ಮಿಜಾರ್, ಜಯಶ್ರೀ, ಶ್ವೇತಾ ಕೋಟ್ಯಾನ್, ಸಹನಾ ಸುಧಾಕರ್, ವೆನ್ಸಿಟಾ ಡಯಾಸ್, ಮೋಹನ್ ರಾಜ್, ಗೌತಮ್ ಬಂಗೇರ, ಸುವರ್ಣ ಪೂಜಾರಿ, ಸವಿತಾ ಅಂಚನ್, ಶಾಹಿನ್ ಶೇಖ್, ಸನ್ನಿಧಿ ಶೆಟ್ಟಿ ಅಭಿನಯಿಸುತ್ತಿದ್ದಾರೆ.ನಿರ್ದೇಶನ : ಜಿಸ್ನು ಎಸ್ ಮೆನನ್ ಸಿದ್ಧಾರ್ಥ್‌ ಶೆಟ್ಟಿ, ನಿರ್ಮಾಪಕರು: ವಿಶಾಂತ್ ಮಿನೆಜಸ್, ಛಾಯಾಗ್ರಾಹಣ: ಚಂದು ಮೆಪ್ಪಾಯೂರ್, ಸಂಕಲನ : ಶರತ್ ಹೆಗ್ಡೆ, ನೃತ್ಯ: ವಿಜೇತ್ ಆರ್ ನಾಯಕ್, ಸಾಹಸ: ಯೋಗಾನಂದ್, ಪ್ರೊಡಕ್ಷನ್ ಮೆನೇಜರ್: ಕಾರ್ತಿಕ್ ರೈ ಅಡ್ಯನಡ್ಕ ಇದ್ದಾರೆ.