ಸಾರಾಂಶ
ಧರ್ಮಸ್ಥಳ ಪ್ರಕರಣದ ಎಸ್‌ಐಟಿ ತನಿಖೆಯನ್ನು ಆಧರಿಸಿಕೊಂಡು ನಿರ್ಮಾಪಕ ಎ. ಗಣೇಶ್ ಅವರು ‘ಧರ್ಮಸ್ಥಳ ಫೈಲ್ಸ್’ ಎಂಬ ಹೆಸರಿನಲ್ಲಿ ವೆಬ್ ಸೀರೀಸ್ ಮಾಡುವುದಾಗಿ ಘೋಷಿಸಿದ್ದಾರೆ.
ಸಿನಿವಾರ್ತೆ
ಧರ್ಮಸ್ಥಳ ಪ್ರಕರಣದ ಎಸ್‌ಐಟಿ ತನಿಖೆಯನ್ನು ಆಧರಿಸಿಕೊಂಡು ನಿರ್ಮಾಪಕ ಎ. ಗಣೇಶ್ ಅವರು ‘ಧರ್ಮಸ್ಥಳ ಫೈಲ್ಸ್’ ಎಂಬ ಹೆಸರಿನಲ್ಲಿ ವೆಬ್ ಸೀರೀಸ್ ಮಾಡುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆಯನ್ನು ನೋಂದಾಯಿಸಿದ್ದಾರೆ.
ಮುಚ್ಚಳಿಕೆ ಬರೆಸಿಕೊಂಡು ಈ ಸಿನಿಮಾ ನಿರ್ಮಾಣಕ್ಕೆ ವಾಣಿಜ್ಯ ಮಂಡಳಿ ಅನುಮತಿ ನೀಡಿದೆ.
ಈ ಬಗ್ಗೆ ವಿವರ ನೀಡಿದ ನಿರ್ಮಾಪಕ ಎ ಗಣೇಶ್, ‘ನಾನು 20 ದಿನಗಳ ಹಿಂದೆ ಈ ಶೀರ್ಷಿಕೆಗಾಗಿ ವಾಣಿಜ್ಯ ಮಂಡಳಿಯಲ್ಲಿ ಅರ್ಜಿ ಹಾಕಿದ್ದೆ. ಇದೀಗ ರಿಜಿಸ್ಟ್ರೇಶನ್ ಆಗಿದೆ. ಇದರ ಸ್ಕ್ರಿಪ್ಟ್ ವರ್ಕ್ ಎಂ.ಎಸ್. ರಮೇಶ್ ಮಾಡುತ್ತಿದ್ದಾರೆ. 15 ಮಂದಿಯ ಡೈರೆಕ್ಷನ್ ಡಿಪಾರ್ಟ್‌ಮೆಂಟ್ ಮಾಡಿದ್ದೇನೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಇದನ್ನು ರಿಲೀಸ್ ಮಾಡುವ ಪ್ಲಾನ್ ಇದೆ. ನವೆಂಬರ್ ಕೊನೆಯಲ್ಲಿ ಚಿತ್ರೀಕರಣ ಮಾಡಲಿದ್ದೇವೆ’ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಎ ನರಸಿಂಹಲು, ‘ಇದು ಸೂಕ್ಷ್ಮ ವಿಚಾರ. ಧರ್ಮಸ್ಥಳ ಕ್ಷೇತ್ರ, ಅಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಸಿನಿಮಾ ಮಾಡುವಾಗ ಜನರ ಭಾವನೆಗೆ ಧಕ್ಕೆಯಾಗುವ ಸಾಧ್ಯತೆ ಇರುವ ಕಾರಣ ಮುಚ್ಚಳಿಕೆ ಬರೆಸಿಕೊಂಡೇ ಶೀರ್ಷಿಕೆ ನೀಡಿದ್ದೇವೆ. ಒಂದು ವೇಳೆ ಸಿನಿಮಾದಿಂದ ಸಮಸ್ಯೆಯಾದರೆ ಅದಕ್ಕೆ ಚಿತ್ರತಂಡದವರೇ ಹೊಣೆಯಾಗಿರುತ್ತಾರೆ’ ಎಂದಿದ್ದಾರೆ.