ಸಾರಾಂಶ
ಉತ್ತರಕಾಂಡ ಸಿನಿಮಾ ಸ್ಥಗಿತಗೊಂಡಿಲ್ಲ, ಕಲಾವಿದರ ಡೇಟ್ಸ್ ಸಮಸ್ಯೆಯಿಂದ ವಿಳಂಬವಾಗುತ್ತಿದೆ ಎಂದು ನಿರ್ಮಾಪಕ ಕಾರ್ತಿಕ್ ಗೌಡ ಹೇಳಿದ್ದಾರೆ.
ಸಿನಿವಾರ್ತೆ
‘ಉತ್ತರಕಾಂಡ ಸಿನಿಮಾ ನಿಂತುಹೋಯ್ತು, ಟೀಮ್‌ನೊಳಗೆ ಸಮಸ್ಯೆಯಾಗಿದೆ ಎಂದೆಲ್ಲ ಹಗುರವಾಗಿ ಮಾತನಾಡಬೇಡಿ. ಈ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿಲ್ಲ. ಕೆಲವು ನಟರ ಡೇಟ್ಸ್‌ಗಾಗಿ ಎದುರು ನೋಡುತ್ತಿದ್ದೇವೆ’ ಎಂದು ನಿರ್ಮಾಪಕ ಕಾರ್ತಿಕ್ ಗೌಡ ಸ್ಪಷ್ಟನೆ ನೀಡಿದ್ದಾರೆ.
ರೋಹಿತ್ ಪದಕಿ ನಿರ್ದೇಶನದ ‘ಉತ್ತರಕಾಂಡ’ ಸಿನಿಮಾ ನಿಂತಿದೆ ಎಂಬ ಸುದ್ದಿ ಹರಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ‘ಸಿನಿಮಾಕ್ಕೆ ಈಗಾಗಲೇ ಶೇ.30ರಷ್ಟು ಶೂಟಿಂಗ್ ಆಗಿದೆ. ಈಗ ಕಲಾವಿದರ ಡೇಟ್ಸ್ ಹೊಂದಿಸುವುದಕ್ಕೆ ಸಮಯ ಹಿಡಿಯುತ್ತಿದೆ. ಉಳಿದಂತೆ ಬೇರೆ ಯಾವ ಸಮಸ್ಯೆಯೂ ಇಲ್ಲ’ ಎಂದಿದ್ದಾರೆ.