ಸಾರಾಂಶ
ಡಾರ್ಕ್ ನೆಟ್ ಕಥಾ ಹಂದರದ ಕಪಟಿ ಸಿನಿಮಾ ಆ. 23ಕ್ಕೆ ಬಿಡುಗಡೆ
‘ಡಾರ್ಕ್ ನೆಟ್ ಎಂಬುದು ನಮ್ಮ ಊಹೆಗೂ ನಿಲುಕದ ಭಯಾನಕ ಜಗತ್ತು. ನಾವು ಇದರ ಬಗ್ಗೆ ಸರ್ಜ್ ಕೊಟ್ಟರೂ ನಮ್ಮ ಅಕೌಂಟ್ ಹ್ಯಾಕ್ ಆಗುವ ಸಾಧ್ಯತೆ ಇದೆ. ಆ ಮಟ್ಟಿಗೆ ಇದು ಅಪಾಯಕಾರಿ.’
- ಹೀಗಂದಿದ್ದು ನಟಿ ಸುಕೃತಾ ವಾಗ್ಲೆ. ಅವರ ನಟನೆಯ ಡಾರ್ಕ್ ನೆಟ್್ ಕಥಾಹಂದರದ ಸೈಕಲಾಜಿಕಲ್ ಥ್ರಿಲ್ಲರ್ ‘ಕಪಟಿ’ ಆಗಸ್ಟ್ 23ಕ್ಕೆ ಬಿಡುಗಡೆಯಾಗಲಿದೆ. ಈ ಕುರಿತ ಸುದ್ದಿಗೋಷ್ಠಿಯಲ್ಲಿ ಸುಕೃತಾ, ‘ನಾನು ಸಿನಿಮಾ ಜಗತ್ತಿಗೆ ಗುಡ್‌ಬೈ ಹೇಳಿ ಉಡುಪಿಯಲ್ಲಿ ಎಲ್‌ಎಲ್‌ಬಿ ಮಾಡ್ತಾ ಆರಾಮವಾಗಿದ್ದೆ. ಆ ಹೊತ್ತಿಗೆ ಈ ಸಿನಿಮಾ ಆಫರ್ ಬಂತು. ನಿರ್ದೇಶಕರು ಇದು ಮಹಿಳಾ ಪ್ರಧಾನ ಚಿತ್ರ ಅಂದಾಗ, ರಿಸ್ಕ್ ಅಲ್ವಾ ಅಂತ ಕೇಳಿದ್ದೆ. ಆದರೆ ನಿರ್ದೇಶಕರಿಗೆ ಗೆಲ್ಲುವ ವಿಶ್ವಾಸ ಇದೆ’ ಎಂದರು.ಮುಖ್ಯ ಪಾತ್ರದಲ್ಲಿ ನಟಿಸಿರುವ ಸಾತ್ವಿಕ್, ‘ಉಡುಪಿಯಲ್ಲಿ ರಂಗಭೂಮಿಯಲ್ಲಿದ್ದುಕೊಂಡು ಪೇಂಟಿಂಗ್, ಇಂಟೀರಿಯರ್ ಡಿಸೈನಿಂಗ್ ಮಾಡ್ತಿದ್ದ ನನಗೆ ಬೆಂಗಳೂರು, ಚಿತ್ರರಂಗ ಎರಡೂ ಹೊಸತು’ ಎಂದರು.
ನಿರ್ಮಾಪಕ ದಯಾಳ್ ಪದ್ಮನಾಭ್, ‘ಯಾವ ಭಾಷೆಯಲ್ಲಿ ಸಿನಿಮಾ ಮಾಡಿದರೂ ನನ್ನ ಐಡೆಂಟಿಟಿ ಕನ್ನಡ ಚಿತ್ರರಂಗ’ ಎಂದು ಹೆಮ್ಮೆಯಿಂದ ಘೋಷಿಸಿದರು. ನಿರ್ದೇಶಕರಾದ ಚೇತನ್ ಹಾಗೂ ರವಿ, ಡಾರ್ಕ್ ನೆಟ್‌ನ ಕರಾಳ ಜಗತ್ತನ್ನು ವಿವರಿಸಿದರು. ಡಾರ್ಲಿಂಗ್ ಕೃಷ್ಣ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ನಟ ದೇವ್ ದೇವಯ್ಯ ಚಿತ್ರದ ಮುಖ್ಯಪಾತ್ರದಲ್ಲಿದ್ದಾರೆ.