ಸಾರಾಂಶ
ಸಿನಿವಾರ್ತೆ
ವಿಶ್ವಾದ್ಯಂತ 12,000 ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಪುಷ್ಪ 2 ಅಬ್ಬರ ಶುರುವಾಗಿದೆ. ರಾಜ್ಯದಲ್ಲಿ 350ಕ್ಕೂ ಹೆಚ್ಚು ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ 1000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಇಂದು ‘ಪುಷ್ಪ 2’ ರಿಲೀಸ್ ಆಗುತ್ತಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ನಟನೆಯ ಈ ಸಿನಿಮಾಕ್ಕೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಚಿತ್ರದ ಟಿಕೆಟ್ ದರದಲ್ಲಿ ವಿಪರೀತ ಏರಿಕೆಯಾಗುತ್ತಿದ್ದು, ಬೆಂಗಳೂರಿನಲ್ಲಿ 2,500 ರು.ವರೆಗೂ ಹೆಚ್ಚಳವಾಗಿದೆ.
ಆದರೂ ಸಿನಿಮಾ ರಿಲೀಸ್‌ಗಳೂ ಮುನ್ನವೇ ರಾಜ್ಯದಲ್ಲಿ 13 ಲಕ್ಷಕ್ಕೂ ಅಧಿಕ ಟಿಕೆಟ್ ಸೇಲ್ ಆಗಿದೆ. ‘ಪುಷ್ಪ 2’ ವಿತರಕ ಲಕ್ಷ್ಮೀಕಾಂತ್ ರೆಡ್ಡಿ ಇದನ್ನು ಧೃಡಪಡಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಗಳಿಕೆ ವಿಚಾರಕ್ಕೆ ಬಂದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ‘ಪುಷ್ಪ 2’ ಕನ್ನಡ ಶೋಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಬೆಂಗಳೂರಿನಲ್ಲಿ 80ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಕನ್ನಡ ವರ್ಶನ್ ಪ್ರದರ್ಶನವಾಗುತ್ತಿದೆ. ‘ರಾಜ್ಯಾದ್ಯಂತವೂ ಕನ್ನಡ ಶೋಗಳಿಗೆ ಹೆಚ್ಚಿನ ಡಿಮ್ಯಾಂಡ್ ಬರುತ್ತಿದೆ, ಕ್ಷಣ ಕ್ಷಣಕ್ಕೂ ಬೇಡಿಕೆ ಹೆಚ್ಚುತ್ತಲೇ ಇದೆ’ ಎಂದು ವಿತರಕ ಲಕ್ಷ್ಮೀಕಾಂತ್ ತಿಳಿಸಿದ್ದಾರೆ. ‘ಪ್ರೀಮಿಯರ್ ಶೋಗಳ ಪೈಕಿ ಬೆಂಗಳೂರಿನಲ್ಲಿ ಈಗಾಗಲೇ ಒಟ್ಟು 40 ಪ್ರೀಮಿಯರ್ ಶೋಗಳಾಗಿವೆ, ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ’ ಎಂದೂ ಅವರು ತಿಳಿಸಿದ್ದಾರೆ. ಬಾಕ್ಸ್
3ಡಿ ಶೋ ಸ್ಥಗಿತ
ತಾಂತ್ರಿಕ ಕಾರಣಕ್ಕೆ ‘ಪುಷ್ಪ 2’ ಚಿತ್ರದ 3 ಡಿ ಶೋಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂದಿನ ವಾರದಿಂದ 3ಡಿ ಪ್ರದರ್ಶನ ಆರಂಭವಾಗಲಿದೆ.