ಸಿನಿವಾರ್ತೆ

ಮಹಾರಾಷ್ಟ್ರದ ಅಲಿಬಾಗ್ ಸೆಲೆಬ್ರಿಟಿಗಳು ಬಹಳ ಇಷ್ಟ ಪಡುವ ತಾಣ. ಮುಂಬೈಯ ದಕ್ಷಿಣ ಕರಾವಳಿಯ ಈ ಭಾಗದಲ್ಲಿ ವಿರಾಟ್‌ ಕೊಹ್ಲಿ - ಅನುಷ್ಕಾ, ದೀಪಿಕಾ ಪಡುಕೋಣೆ - ರಣವೀರ್‌ ಸಿಂಗ್‌, ಶಾರೂಖ್‌, ಸಲ್ಮಾನ್‌ ಖಾನ್‌ ಸೇರಿದಂತೆ ಬಾಲಿವುಡ್‌ನ ಸ್ಟಾರ್‌ಗಳ ಲಕ್ಸುರಿ ಮನೆಗಳು ಇವೆ.

ರಾಧಿಕಾ ಪಂಡಿತ್‌ ಹಾಗೂ ಯಶ್‌ ಜಾಗ ಖರೀದಿ

ಇದೇ ಜಾಗದಲ್ಲಿ ಇದೀಗ ಕನ್ನಡದ ತಾರಾ ಜೋಡಿಗಳಾದ ರಾಧಿಕಾ ಪಂಡಿತ್‌ ಹಾಗೂ ಯಶ್‌ ಜಾಗ ಖರೀದಿ ಮಾಡಿದ್ದಾರೆ. ಸುಮಾರು 24 ಕೋಟಿ ರು.ಗಳಿಗೆ ವ್ಯವಹಾರ ನಡೆದಿದ್ದು, ಅಲಿಬಾಗ್‌ ಸಬ್‌ ರಿಜಿಸ್ಟ್ರಾರ್‌ ಆಫೀಸ್‌ನಲ್ಲಿ ಹಸ್ತಾಂತರ ಪ್ರಕ್ರಿಯೆ ನಡೆದಿದೆ. 


ಸಮುದ್ರಕ್ಕೆ ಮುಖ ಮಾಡಿರುವ ಈ ಜಾಗ

ಸಮುದ್ರಕ್ಕೆ ಮುಖ ಮಾಡಿರುವ ಈ ಜಾಗ 5,289 ಚದರ ಮೀಟರ್‌ ವಿಸ್ತೀರ್ಣದಲ್ಲಿದ್ದು, ಕೃಷಿಭೂಮಿಯನ್ನು ಒಳಗೊಂಡಿದೆ. ಅಲಿಬಾಗ್‌ ತಾಲೂಕಿನ ಕಾಮತ್‌ ಗ್ರಾಮದ ಕಿಹಿಮ್‌ ಬೀಚ್‌ ಪಕ್ಕದಲ್ಲೇ ರಾಧಿಕಾ ಮತ್ತು ಯಶ್ ಹೊಸ ಜಾಗವಿದೆ.