ಜನವರಿಯಲ್ಲಿ ಬರಲಿದೆ 17 ವರ್ಷಗಳ ಹಿಂದಿನ ಚಿತ್ರ ಉಪೇಂದ್ರ, ರಮ್ಯ ನಟನೆಯ ರಕ್ತ ಕಾಶ್ಮೀರ

| Published : Dec 05 2024, 12:31 AM IST / Updated: Dec 07 2024, 06:58 AM IST

ಜನವರಿಯಲ್ಲಿ ಬರಲಿದೆ 17 ವರ್ಷಗಳ ಹಿಂದಿನ ಚಿತ್ರ ಉಪೇಂದ್ರ, ರಮ್ಯ ನಟನೆಯ ರಕ್ತ ಕಾಶ್ಮೀರ
Share this Article
  • FB
  • TW
  • Linkdin
  • Email

ಸಾರಾಂಶ

ಪಾಕ್ ಉಗ್ರಗಾಮಿಗಳ ಸಮಸ್ಯೆಗೆ ಸಂಬಂಧಿಸಿದ ರಕ್ತ ಕಾಶ್ಮೀರ ಸಿನಿಮಾ ಜನವರಿಯಲ್ಲಿ ರಿಲೀಸ್‌.

 ಸಿನಿವಾರ್ತೆ

17 ವರ್ಷಗಳ ಹಿಂದೆ ‘ಭೀಮೂಸ್‍ ಬ್ಯಾಂಗ್‍ ಬ್ಯಾಂಗ್‍ ಕಿಡ್ಸ್’ ಎಂಬ ಹೆಸರಿನಲ್ಲಿ ಚಿತ್ರೀಕರಣಗೊಂಡ ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ ಸಿನಿಮಾ ಇದೀಗ ‘ರಕ್ತ ಕಾಶ್ಮೀರ’ ಹೆಸರಿನಲ್ಲಿ ಬಿಡುಗಡೆಗೆ ಸಜ್ಜಾಗಿದೆ. 

ಉಪೇಂದ್ರ ಹಾಗೂ ರಮ್ಯಾ ಈ ಸಿನಿಮಾದ ನಾಯಕ, ನಾಯಕಿ. ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ, ಉಗ್ರರ ನಿರ್ಮೂಲನೆ ಮುಖ್ಯ ಅಂಶವಾಗಿರುವ ಈ ಚಿತ್ರವನ್ನು ಎಂಡಿಎಂ ಪ್ರೊಡಕ್ಷನ್ಸ್‌ ನಿರ್ಮಿಸಿದೆ. ಗುರುಕಿರಣ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ದೊಡ್ಡಣ್ಣ, ಓಂಪ್ರಕಾಶ್ ರಾವ್, ಕುರಿ ಪ್ರತಾಪ್ ನಟಿಸಿದ್ದಾರೆ.