ಸಾರಾಂಶ
ರಾಜ್ ಶೆಟ್ಟಿ ನಟನೆಯ ರೂಪಾಂತರ ಹಾಗೂ ಹೊಸಬರ ರಕ್ತಾಕ್ಷ ಸಿನಿಮಾಗಳು ಇಂದು ಬಿಡುಗಡೆಯಾಗುತ್ತಿವೆ.
ರೂಪಾಂತರ
ರಾಜ್ ಬಿ ಶೆಟ್ಟಿ ನಟಿಸಿ, ಮಿಥಿಲೇಶ್ ಎಡವಲತ್ ನಿರ್ದೇಶಿಸಿರುವ ‘ರೂಪಾಂತರ’ ಸಿನಿಮಾ ಇಂದು ರಿಲೀಸ್ ಆಗುತ್ತಿದೆ. ರಾಜ್ ಶೆಟ್ಟಿ ಲೋಕಲ್ ರೌಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಗಳ ರೂಪಾಂತರವೇ ಇಲ್ಲಿ ಪ್ರಧಾನವಾಗಿದೆ. ಇದೊಂದು ವಿಭಿನ್ನ ಸಿನಿಮಾ, ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದು ರಾಜ್ ಬಿ ಶೆಟ್ಟಿ ಹೇಳಿಕೊಂಡಿದ್ದಾರೆ.ಲೇಖಾ ನಾಯ್ಡು, ಹನುಮಕ್ಕ, ಭರತ್ ಜಿಬಿ, ಸೋಮಶೇಖರ್ ಬೋಳೆಗಾಂವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಮತ್ತು ಮಿಥುನ್ ಮುಕುಂದನ್ ಸಂಗೀತವಿದೆ. ರಕ್ತಾಕ್ಷ
ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ರೋಹಿತ್ ನಟನೆ, ನಿರ್ಮಾಣದ ಥ್ರಿಲ್ಲರ್ ‘ರಕ್ತಾಕ್ಷ’ ಇಂದು ಬಿಡುಗಡೆಯಾಗುತ್ತಿದೆ. ವಾಸುದೇವ ಎಸ್.ಎನ್ ಚಿತ್ರದ ನಿರ್ದೇಶಕರು. ರೋಹಿತ್ ಹಾಗೂ ವಾಸುದೇವ್ ಇಬ್ಬರಿಗೂ ಇದು ಮೊದಲ ಸಿನಿಮಾ. ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರಥ್, ನಿವೀಕ್ಷ ನಾಯ್ಡು, ಪ್ರಮೋದ್ ಶೆಟ್ಟಿ ಮುಖ್ಯ ಪಾತ್ರಗಳಲ್ಲಿದ್ದಾರೆ.