ರಮ್ಯಾ ಹಾಗೂ ವಿನಯ್‌ ರಾಜ್‌ಕುಮಾರ್‌ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಪ್ರವಾಸದ ಫೋಟೋಗಳನ್ನು ರಮ್ಯಾ ಮೇಲಿಂದ ಮೇಲೆ ಸೋಷಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ.

ಸಿನಿವಾರ್ತೆ

ರಮ್ಯಾ ಹಾಗೂ ವಿನಯ್‌ ರಾಜ್‌ಕುಮಾರ್‌ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಪ್ರವಾಸದ ಫೋಟೋಗಳನ್ನು ರಮ್ಯಾ ಮೇಲಿಂದ ಮೇಲೆ ಸೋಷಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಈ ಫೋಟೋಗಳು ಟ್ರೆಂಡಿಂಗ್‌ ಆಗಿದ್ದವು. ಇದಕ್ಕೆ ಥರಾವರಿ ಪ್ರತಿಕ್ರಿಯೆಗಳೂ ವ್ಯಕ್ತವಾದವು. ರಮ್ಯಾ ಅವರು ವಿನಯ್‌ ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ ಅನ್ನುವ ಮಾತುಗಳೂ ಕೇಳಿಬಂದವು.

ಇದಕ್ಕೆ ತನ್ನದೇ ಧಾಟಿಯಲ್ಲಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

‘ನೀವೆಲ್ಲ ಬಹಳ ಫನ್ನಿಯಾಗಿ ಯೋಚನೆ ಮಾಡುತ್ತಿದ್ದೀರಿ. ಹಿಂದೂ ಮುಂದೂ ಯೋಚಿಸದೇ ತೀರ್ಮಾನ ಮಾಡಿ ಬಿಡುತ್ತೀರಿ. ವಿನಯ್‌ ರಾಜ್‌ಕುಮಾರ್‌ ನನ್ನ ತಮ್ಮನಿದ್ದ ಹಾಗೆ. ನಿಮ್ಮ ಕಲ್ಪನೆಗೆ ಬ್ರೇಕ್‌ಹಾಕಿ ಮಹಾಜನರೇ’ ಎಂದು ರಮ್ಯಾ ಹೇಳಿದ್ದಾರೆ.