ರತನ್ ಚೆಂಗಪ್ಪ ನಟನೆಯ ರಾವಣ್ ಚಿತ್ರಕ್ಕೆ ಮುಹೂರ್ತ
KannadaprabhaNewsNetwork | Published : Oct 12 2023, 12:00 AM IST
ರತನ್ ಚೆಂಗಪ್ಪ ನಟನೆಯ ರಾವಣ್ ಚಿತ್ರಕ್ಕೆ ಮುಹೂರ್ತ
ಸಾರಾಂಶ
ರತನ್ ಚೆಂಗಪ್ಪ ನಟನೆಯ ರಾವಣ್ ಚಿತ್ರಕ್ಕೆ ಇತ್ತೀಚೆಗಷ್ಟೆ ಮುಹೂರ್ತ ನಡೆಯಿತು.
ಕನ್ನಡಪ್ರಭ ಸಿನಿವಾರ್ತೆ ಹಲವು ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿರುವ ರತನ್ ಚೆಂಗಪ್ಪ ನಾಯಕನಾಗಿ ನಟಿಸುತ್ತಿರುವ ‘ರಾವಣ್’ ಚಿತ್ರಕ್ಕೆ ಮುಹೂರ್ತ ನಡೆಯಿತು. ಈ ಹಿಂದೆ ‘ಮಿಸ್ ನಂದಿನಿ’ ಚಿತ್ರವನ್ನು ನಿರ್ದೇಶಿಸಿದ್ದ ಗುರುದತ್ ಎಸ್ ಆರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಡೂರು ಮೂಲದ ನೀಲಕಂಠಸ್ವಾಮಿ ಚಿತ್ರದ ನಿರ್ಮಾಪಕರು. ತಪಸ್ವಿ ಪೂಣಚ್ಚ ಪತ್ರಕರ್ತೆಯಾಗಿ ನಾಯಕಿ ಪಾತ್ರದಲ್ಲಿ, ಸಮೀಕ್ಷಾ ಎರಡನೇ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿದ್ಲಿಂಗು ಶ್ರೀಧರ್, ಪ್ರಮೋದ್ ಶೆಟ್ಟಿ, ರಂಗಾಯಣ ರಘು, ರಘು ಪಾಂಡೇಶ್ವರ್, ಟಗರು ಸರೋಜ, ಕಾರ್ತಿಕ್ ಹಾಗೂ ಜಗ್ಗಪ್ಪ ತಾರಾಗಣದಲ್ಲಿದ್ದಾರೆ.