ಇದು ನಮ್‌ ಶಾಲೆ ಚಿತ್ರದ ಹಾಡು ರಿಲೀಸ್‌ ಮಾಡಿದ ರವಿ ಡಿ ಚನ್ನಣ್ಣನವರ್‌

| Published : May 15 2024, 01:30 AM IST / Updated: May 16 2024, 08:34 AM IST

ಇದು ನಮ್‌ ಶಾಲೆ ಚಿತ್ರದ ಹಾಡು ರಿಲೀಸ್‌ ಮಾಡಿದ ರವಿ ಡಿ ಚನ್ನಣ್ಣನವರ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಿ ಕೃಷ್ಣ ಬೆಳ್ತಂಗಡಿ ನಿರ್ದೇಶನದ ಇದು ನಮ್‌ ಶಾಲೆ ಸಿನಿಮಾದ ಮೊದಲ ಹಾಡನ್ನು ರವಿ ಡಿ ಚನ್ನಣ್ಣನವರ್‌ ಬಿಡುಗಡೆ ಮಾಡಿದರು.

 ಸಿನಿವಾರ್ತೆ

ಕೃಷ್ಣ ಬೆಳ್ತಂಗಡಿ ನಿರ್ದೇಶನದ ‘ಇದು ನಮ್ ಶಾಲೆ’ ಸಿನಿಮಾದ ಮೊದಲ ಹಾಡನ್ನು ಖ್ಯಾತ ಪೊಲೀಸ್‌ ಅಧಿಕಾರಿ ರವಿ ಡಿ ಚನ್ನಣ್ಣನವರ್‌ ಬಿಡುಗಡೆ ಮಾಡಿ, ‘ನಾನು ಸರ್ಕಾರಿ ಶಾಲೆಯಲ್ಲೇ ಕಲಿತು ಐಪಿಎಸ್ ಅಧಿಕಾರಿ ಆಗಿದ್ದೇನೆ. ಸಿನಿಮಾ ಮೂಲಕ ಒಳ್ಳೆಯ ವಿಷಯಗಳನ್ನು ಹೇಳಿದಾಗ ಜನರಿಗೆ ಬೇಗ ತಲಪುತ್ತದೆ’ ಎಂದರು.

ಎರಡನೇ ಗೀತೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ಅನಾವರಣಗೊಳಿಸಿದರು. ಇದೇ ಸಮಯದಲ್ಲಿ ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಯಿತು. ನಿರ್ದೇಶಕ ಕೃಷ್ಣ ಬೆಳ್ತಂಗಡಿ, ‘ಮೂಲತಃ ಪತ್ರಕರ್ತನಾದ ನಾನು ಇದೀಗ ಶಿಕ್ಷಣ ವ್ಯವಸ್ಥೆಯ ಕುರಿತಾದ ಚಿತ್ರ ನಿರ್ದೇಶಿಸಿದ್ದೇನೆ. ಇದು ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆಗಳ ಬಗ್ಗೆ ತಿಳಿಸಿ ಕೊಡುವ ಚಿತ್ರ’ ಎಂದರು.

ಅರಸೀಕೆರೆ ಶಾಸಕ ಶಿವಲಿಂಗೇಗೌಡ ಈ ಸಿನಿಮಾದಲ್ಲಿ ಮುಖ್ಯಮಂತ್ರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪುಣ್ಯ ಹಾಗೂ ಪೂಜ್ಯ ಮುಖ್ಯ ಪಾತ್ರದಲ್ಲಿದ್ದಾರೆ. ರವಿ ಆಚಾರ್ ನಿರ್ಮಾಪಕರು. ಅರಸೀಕೆರೆ ಉಮೇಶ್ ಕಾರ್ಯಕಾರಿ ನಿರ್ಮಾಪಕರು.