ರಿಷಬ್‌ ಶೆಟ್ಟಿ ನಟನೆಯ ಛತ್ರಪತಿ ಶಿವಾಜಿ ಮಹಾರಾಜ್‌ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ

| N/A | Published : Feb 20 2025, 12:50 AM IST / Updated: Feb 20 2025, 07:14 AM IST

ಸಾರಾಂಶ

ರಿಷಬ್‌ ಶೆಟ್ಟಿ ನಟನೆಯ ಶಿವಾಜಿ ಮಹಾರಾಜ್‌ ಸಿನಿಮಾದ ಫಸ್ಟ್ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ.

ಕನ್ನಡಪ್ರಭ ಸಿನಿವಾರ್ತೆಶಿವಾಜಿ ಮಹಾರಾಜರ 395ನೇ ಜಯಂತಿಯ ಪ್ರಯುಕ್ತ ರಿಷಬ್‌ ಶೆಟ್ಟಿ ನಟನೆಯ ಬಾಲಿವುಡ್ ಸಿನಿಮಾ ‘ಛತ್ರಪತಿ ಶಿವಾಜಿ ಮಹಾರಾಜ್‌’ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಇದರಲ್ಲಿ ದೇವಿ ಭವಾನಿಯ ಬೃಹತ್‌ ವಿಗ್ರಹದ ಮುಂದೆ ಶಿವಾಜಿ ಮಹಾರಾಜರ ಪಾತ್ರದಲ್ಲಿ ರಿಷಬ್‌ ನಿಂತಿದ್ದಾರೆ.

‘ಒಂದಿಡೀ ಖಂಡವನ್ನೇ ಸಾಂಸ್ಕೃತಿಕವಾಗಿ ಬದಲಿಸಿ ದಂತಕಥೆಯಾದ ರಾಜನ ಶಕ್ತಿ ಮತ್ತು ಭಕ್ತಿಯನ್ನು ಪ್ರದರ್ಶಿಸುವ ಫಸ್ಟ್‌ಲುಕ್‌ ಅನ್ನು ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದ್ದೇನೆ. ಮಹಾನ್‌ ಪ್ರತಿಭಾವಂತರ ತಂಡದೊಂದಿಗೆ ಶಿವಾಜಿ ಮಹಾರಾಜರ ಅಸಾಧಾರಣ ಶೌರ್ಯ, ಗೌರವ ಮತ್ತು ಸ್ವರಾಜ್ಯ ಸಾಹಸಗಾಥೆಗೆ ಮರು ಜೀವ ನೀಡುತ್ತಿದ್ದೇವೆ. ಈ ಮೂಲಕ ಆ ಐತಿಹಾಸಿಕ ವೀರನಿಗೆ ಗೌರವ ಸಲ್ಲಿಸುತ್ತಿದ್ದೇವೆ’ ಎಂದು ನಿರ್ದೇಶಕ ಸಂದೀಪ್ ಸಿಂಗ್ ಸೋಷಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಬಹುಕೋಟಿ ಬಜೆಟ್‌ನ ಪ್ಯಾನ್ ಇಂಡಿಯಾ ಚಿತ್ರ 2027ರ ಜನವರಿ 21ಕ್ಕೆ ಬಿಡುಗಡೆ ಆಗಲಿದೆ.