ಜು.26ಕ್ಕೆ ರಾಜ್‌ ಬಿ ಶೆಟ್ಟಿ ನಟನೆಯ ರೂಪಾಂತರ ರಿಲೀಸ್‌

| Published : Jul 11 2024, 01:37 AM IST / Updated: Jul 11 2024, 04:54 AM IST

ಜು.26ಕ್ಕೆ ರಾಜ್‌ ಬಿ ಶೆಟ್ಟಿ ನಟನೆಯ ರೂಪಾಂತರ ರಿಲೀಸ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್‌ ಬಿ ಶೆಟ್ಟಿ ನಟನೆ, ಚಿತ್ರಕಥೆ, ಅರ್ಪಣೆ ಇರುವ ರೂಪಾಂತರ ಸಿನಿಮಾ ಜು.26ಕ್ಕೆ ಬಿಡುಗಡೆ

 ಸಿನಿವಾರ್ತೆ

ರಾಜ್‌ ಬಿ ಶೆಟ್ಟಿ ಮುಖ್ಯಪಾತ್ರದಲ್ಲಿ ನಟಿಸಿ, ಅರ್ಪಿಸುತ್ತಿರುವ ‘ರೂಪಾಂತರ’ ಸಿನಿಮಾ ಜು.26ಕ್ಕೆ ತೆರೆಗೆ ಬರಲಿದೆ. ಕೇರಳದ ಮಿಥಿಲೇಶ್ ಎಡವಲತ್ ನಿರ್ದೇಶಕರು.

ಇದೊಂದು ಆ್ಯಂಥಾಲಜಿ. ಇದರಲ್ಲಿ ಸ್ಲಂ ಹಿನ್ನೆಲೆಯ ಗೂಂಡಾ ಪಾತ್ರದಲ್ಲಿ ರಾಜ್‌ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಮಾತು ಮಾತಿಗೂ ತೋಳೇರಿಸಿಕೊಂಡು ಬರುವ ರೌಡಿಯೊಬ್ಬ ಸನ್ನಿವೇಶದ ಸುಳಿಗೆ ಸಿಕ್ಕು ಹೇಗೆ ರೂಪಾಂತರವಾಗುತ್ತಾನೆ ಎಂಬುದು ಅವರ ಭಾಗದ ಕಥಾಹಂದರ. ಒಟ್ಟು 5 ಕಥಾಸರಣಿಯ ಈ ಸಿನಿಮಾದ ಕಥೆ ಮೆಟಮಾರ್ಫಸಿಸ್‌ ಅಥವಾ ರೂಪಾಂತರಕ್ಕೆ ಸಂಬಂಧಿಸಿದ್ದು. ಮಿಥಿಲೇಶ್‌ ಅವರ ಕಥೆಯನ್ನು ಕನ್ನಡಕ್ಕೆ ಭಾವಾಂತರಿಸಿ ಚಿತ್ರಕಥೆ, ಸಂಭಾಷಣೆ ಬರೆದವರು ರಾಜ್‌ ಬಿ ಶೆಟ್ಟಿ. ಸುಹಾನ್‌ ಪ್ರಸಾದ್‌ ಚಿತ್ರದ ನಿರ್ಮಾಪಕರು.

ರಾಜ್‌ ಬಿ ಶೆಟ್ಟಿ, ಚೈತ್ರಾ ಆಚಾರ್‌ ಜೊತೆಗೆ ಶ್ವೇತಾ, ಲಚ್ಚವ್ವ ನಿರ್ದೇಶಕ ಜೈ ಶಂಕರ್‌, ಭರತ್‌ ಜಿಬಿ, ಮುರಳೀಧರ ಸಿ ಕೆ, 73ರ ಹರೆಯದ ರಂಗ ನಿರ್ದೇಶಕ ಸೋಮಣ್ಣ ಬೋಲೆಗಾಂವ್‌, ರೇಖಾ, ಹನಮಕ್ಕ, ಅಂಜನ್‌ ಭಾರದ್ವಾಜ್‌ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.