ಸಾರಾಂಶ
ರಾಜ್ ಬಿ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ ರೂಪಾಂತರ ಸಿನಿಮಾ ಜು 26ಕ್ಕೆ ತೆರೆಗೆ ಬರುತ್ತಿದೆ.
ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ರೂಪಾಂತರ’ ಸಿನಿಮಾ ಜು.26ಕ್ಕೆ ತೆರೆಗೆ ಬರುತ್ತಿದೆ. ಈಗ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಮಿಥಿಲೇಶ್ ಎಡವಲತ್ ನಿರ್ದೇಶನದ ಈ ಚಿತ್ರದಲ್ಲಿ ಅಂಜನ್ ಭಾರದ್ವಾಜ್, ಲೇಖಾ ನಾಯ್ಡು ಸೋಮಶೇಖರ್ ಬೋಲೇಗಾಂವ್, ಹನುಮಕ್ಕ, ಭರಜ್ ಜಿ ಬಿ ನಟಿಸಿದ್ದಾರೆ.
ಸುಹಾನ್ ಪ್ರಸಾದ್ ಚಿತ್ರದ ನಿರ್ಮಾಪಕರು. ರಾಜ್ ಬಿ ಶೆಟ್ಟಿ, ‘ಇದು ನನಗೆ ಬಹಳ ಇಷ್ಟವಾದ ಸಿನಿಮಾ. ನನ್ನ ಬಿಟ್ಟು ಬೇರೆ ಮುಖ್ಯಪಾತ್ರಗಳು ಈ ಚಿತ್ರದಲ್ಲಿದೆ. ಅವರೆಲ್ಲಾ ರೂಪಾಂತರಗೊಳ್ಳುವುದೇ ಚಿತ್ರದ ಕಥೆ. ಒಂದು ಮೊಟ್ಟೆಯ ಕಥೆ ಚಿತ್ರ ಮಾಡಿದ ತಂಡದೊಂದಿಗೆ ಮತ್ತೆ ಚಿತ್ರ ಮಾಡುತ್ತಿದ್ದೇನೆ’ ಎಂದರು.