ಸುದೀಪ್‌ ಅಕ್ಕನ ಮಗ ಸಂಚಿ ನಟನೆಯ ಹೊಸ ಚಿತ್ರದ ಹೆಸರು ಮ್ಯಾಂಗೋ ಪಚ್ಚ : ಶೀರ್ಷಿಕೆ ಬಿಡುಗಡೆ ಮಾಡಿ ಶುಭ ಕೋರಿಕೆ

| N/A | Published : Feb 06 2025, 12:16 AM IST / Updated: Feb 06 2025, 05:35 AM IST

ಸಾರಾಂಶ

ಸುದೀಪ್‌ ಅಕ್ಕನ ಮಗ ಸಂಚಿ ಹೊಸ ಸಿನಿಮಾ ಮ್ಯಾಂಗೋ ಪಚ್ಚ

 ಸಿನಿವಾರ್ತೆ

ಸುದೀಪ್ ಅಕ್ಕನ ಮಗ ಸಂಚಿ ನಟನೆಯ ಹೊಸ ಚಿತ್ರಕ್ಕೆ ‘ಮ್ಯಾಂಗೋ ಪಚ್ಚ’ ಎಂದು ಹೆಸರಿಡಲಾಗಿದೆ.

 ಸಂಚಿ ಹುಟ್ಟುಹಬ್ಬದಂದು ಸಿನಿಮಾ ಶೀರ್ಷಿಕೆಯನ್ನು ಕಿಚ್ಚ ಸುದೀಪ್‌ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಈ ವೇಳೆ ಸಿನಿಮಾದ ಪಾತ್ರ ಪರಿಚಯದ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ವಿಡಿಯೋದಲ್ಲಿ ಸಂಚಿಯ ಖಡಕ್ ಲುಕ್ ರಿವೀಲ್ ಆಗಿದೆ. ಇದು ಮೈಸೂರು ಹಿನ್ನೆಲೆಯ ಕ್ರೈಂ ಥ್ರಿಲ್ಲರ್ ಆಗಿದ್ದು, 2001ರಿಂದ 2011ರ ಅವಧಿಯಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿವೆ. ಕಾಜಲ್ ಕುಂದರ್ ಸಿನಿಮಾದ ನಾಯಕಿ. ವಿವೇಕ್‌ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅಕ್ಕನ ಮಗ ಜೈ, ಮಾಲಾಶ್ರೀ ನಟಿಸುತ್ತಿದ್ದಾರೆ. ಚರಣ್‌ರಾಜ್ ಸಂಗೀತ ನಿರ್ದೇಶನವಿದೆ.