ಸಂಜು ವೆಡ್ಸ್‌ ಗೀತಾ 2 ರಿಲೀಸ್‌ ಮದುವೆ ಮಾಡಿದ್ದಕ್ಕಿಂತ ಕಷ್ಟ ಆಯ್ತು: ನಾಗಶೇಖರ್‌

| Published : Jan 15 2025, 12:45 AM IST

ಸಾರಾಂಶ

ಸಂಜು ವೆಡ್ಸ್‌ ಗೀತಾ 2 ಟ್ರೇಲರ್ ರಿಲೀಸ್‌

ಕನ್ನಡಪ್ರಭ ಸಿನಿವಾರ್ತೆ‘ಸಂಜು ವೆಡ್ಸ್‌ ಗೀತಾ 2 ಸಿನಿಮಾ ರಿಲೀಸ್‌ ಕಥೆ ಮದುವೆ ಮಾಡಿದ್ದಕ್ಕಿಂತ ಕಷ್ಟ ಆಗೋಯ್ತು. ಆದರೂ ಲೇಟಾಗಿ ತೆರೆಗೆ ಬರುತ್ತಿರುವುದು ಒಳ್ಳೆಯದೇ ಆಯಿತು. ಏಕೆಂದರೆ ಕಳೆದ ವಾರ ರಿಲೀಸ್‌ ಆದ ಸಿನಿಮಾಗಳು ಹೆಚ್ಚು ಓಡದೇ ನಮ್ಮ ಸಿನಿಮಾಕ್ಕೆ ಹೆಚ್ಚು ಥೇಟರ್‌ ಸಿಕ್ಕಿವೆ.’

- ಹೀಗಂದಿದ್ದು ನಿರ್ದೇಶಕ ನಾಗಶೇಖರ್‌. ಅವರ ನಿರ್ದೇಶನದ ‘ಸಂಜು ವೆಡ್ಸ್‌ ಗೀತಾ 2’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಜ.17ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ನಾಗಶೇಖರ್‌, ‘ಶ್ರೇಯಾ ಘೋಶಾಲ್ ನಮ್ಮ ಸಿನಿಮಾಕ್ಕೆ ಹಾಡಬೇಕಿತ್ತು. ಆದರೆ ಆಕೆ ಕಾಯಿಸಿ ಕಾಯಿಸಿ ಕೈಕೊಟ್ಟರು. ಅವರು ಕನ್ನಡ ಸಿನಿಮಾಗಳಿಗೆ ಹಾಡೋದನ್ನು ಅವಾಯ್ಡ್‌ ಮಾಡುತ್ತಿರುವುದೂ ತಿಳಿಯಿತು. ಆದರೆ ಅವರು ಹೀಗೆ ಮಾಡಿದ್ದರಿಂದ ಸಂಗೀತಾ ಎಂಬ ಕನ್ನಡದ ಹುಡುಗಿ ಸಿನಿಮಾ ಗಾಯನ ಕ್ಷೇತ್ರಕ್ಕೆ ಹೊಸ ಸೇರ್ಪಡೆಯಾದರು’ ಎಂದೂ ಹೇಳಿದರು.

ನಾಯಕಿ ರಚಿತಾ ರಾಮ್‌ ಎಂದಿನಂತೆ ಈ ಸುದ್ದಿಗೋಷ್ಠಿಯಲ್ಲೂ ಗೈರಾಗಿದ್ದರು.

ನಾಯಕ ಶ್ರೀನಗರ ಕಿಟ್ಟಿ, ನಿರ್ಮಾಪಕ ಛಲವಾದಿ ಕುಮಾರ್‌, ವಿತರಕ ಗೋಕುಲ್‌ ರಾಜ್‌ ಹಾಜರಿದ್ದರು.