ಸಾರಾಂಶ
ಕಾಂತಾರ ಪ್ರೀಕ್ವಲ್‌ಗೆ ಹಿರಿಯ ನಟ ಜಯರಾಂ ಎಂಟ್ರಿ
ಮಲಯಾಳಂ ಮೂಲದ ಜನಪ್ರಿಯ ನಟ ಜಯರಾಮ್ ‘ಕಾಂತಾರ ಅಧ್ಯಾಯ 1’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಈ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಅನುಭವಿ ನಟನ ಅಗತ್ಯವಿತ್ತು, ಈ ಹಿನ್ನೆಲೆಯಲ್ಲಿ ಈಗಾಗಲೇ ಐತಿಹಾಸಿಕ, ಪೌರಾಣಿಕ ಸಿನಿಮಾ ಪಾತ್ರಗಳಲ್ಲಿ ಹೆಸರು ಮಾಡಿರುವ ಜಯರಾಮ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಯರಾಂ ಪ್ರಸ್ತುತ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’, ತಮಿಳಿನ ಧನುಷ್ ಸಿನಿಮಾ ‘ರಾಯನ್’, ದಳಪತಿ ವಿಜಯ್ ನಟಿಸುತ್ತಿರುವ ‘ಗೋಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.