ಸಾರಾಂಶ
ಶಾನ್ವಿ ಶ್ರೀವಾಸ್ತವ್ ಕನ್ನಡ ಸಿನಿಮಾದಲ್ಲಿ ನಟಿಸಲು 30 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆಸಾಮಾನ್ಯವಾಗಿ ನಟ, ನಟಿಯರು ತಮ್ಮ ಸಂಭಾವನೆ ವಿಚಾರ ರಿವೀಲ್ ಮಾಡುವುದಿಲ್ಲ. ಆದರೆ ನಟಿ ಶಾನ್ವಿ ಶ್ರೀವಾಸ್ತವ್ ಈ ಬಗ್ಗೆ ಮುಕ್ತವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ತಾನೀಗ ಕನ್ನಡ ಸಿನಿಮಾರಂಗದಲ್ಲಿ 30 ಲಕ್ಷ ರು. ಸಂಭಾವನೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
‘ಪದವಿ ಓದುವಾಗ ನನ್ನ ಫೀಸ್ ನಾನೇ ಕಟ್ಟಬೇಕು ಅಂತ ನಟಿಸಲು ಆರಂಭಿಸಿದೆ. ನನ್ನ ಮೊದಲ ಸಂಭಾವನೆ 3 ಲಕ್ಷ ರೂಪಾಯಿ. ಚಿತ್ರರಂಗಕ್ಕೆ ಬರುವ ಮುನ್ನ ಒಂದು ಕೋಚಿಂಗ್ ಸೆಂಟರ್‌ನಲ್ಲಿ ಪಾಠ ಮಾಡಿದ್ದೆ. ತಿಂಗಳಿಗೆ 3,500 ರೂಪಾಯಿ ಸಂಬಳ ಸಿಗುತ್ತಿತ್ತು. ಒಂದು ಚಿತ್ರಕ್ಕೆ 3 ಲಕ್ಷ ಅಂದಾಗ ಇಡೀ ಕಾಲೇಜು ಫೀಸ್ ಬರುತ್ತಲ್ಲ ಎಂದು ನಟಿಸಿದೆ. ಈಗ ಕನ್ನಡದಲ್ಲಿ ಒಂದು ಚಿತ್ರಕ್ಕೆ 30 ಲಕ್ಷ ರೂಪಾಯಿ ಸಂಭಾವನೆ ಸಿಗುತ್ತಿದೆ. ಆದರೆ ಮಾರ್ಕೆಟ್‌ಗೆ ತಕ್ಕಂತೆ ಸಂಭಾವನೆಯೂ ಬದಲಾಗುತ್ತದೆ’ ಎಂದು ಶಾನ್ವಿ ಹೇಳಿದ್ದಾರೆ.ಸದ್ಯ ಶಾನ್ವಿ ಕನ್ನಡದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ -2’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.