ಶಿವಮ್ಮ ಚಿತ್ರದ ಟೀಸರ್ ಇಂದು ಬಿಡುಗಡೆ

| Published : Oct 11 2023, 12:45 AM IST

ಸಾರಾಂಶ

ಹಲವಾರು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ತೆರೆಕಂಡು ಅನೇಕ ಪ್ರಶಸ್ತಿ ಗಳಿಸಿರುವ ರಿಷಬ್‌ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಚಿತ್ರದ ಟೀಸರ್‌ ರಿಷಬ್‌ ಶೆಟ್ಟಿ ಫಿಲಂಸ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ
ಕನ್ನಡಪ್ರಭ ಸಿನಿವಾರ್ತೆ ಹಲವಾರು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ತೆರೆಕಂಡು ಅನೇಕ ಪ್ರಶಸ್ತಿ ಗಳಿಸಿರುವ ರಿಷಬ್‌ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಚಿತ್ರದ ಟೀಸರ್‌ ಇಂದು ಸಂಜೆ 6 ಗಂಟೆಗೆ ರಿಷಬ್‌ ಶೆಟ್ಟಿ ಫಿಲಂಸ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆಯಾಗಲಿದೆ. ಜೈಶಂಕರ್‌ ಆರ್ಯರ್‌ ನಿರ್ದೇಶನದ ಈ ಚಿತ್ರ ಮುಂಬೈಯಲ್ಲಿ ನಡೆಯುವ ಮಾಮಿ ಚಿತ್ರೋತ್ಸವದಲ್ಲಿ ದಕ್ಷಿಣ ಏಷ್ಯಾ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ 46 ವರ್ಷದ ಶಿವಮ್ಮ ಎಂಬ ಮಹಿಳೆಯ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ.