ಸಾರಾಂಶ
ಶಿವರಾಜ್ ಕುಮಾರ್ ನಟನೆಯ ‘ಸರ್ವೈವರ್’ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ಶಿವಣ್ಣ ಅವರು ಮೂತ್ರಕೋಶ ಕ್ಯಾನ್ಸರ್‌ನಿಂದ ಗೆದ್ದು ಬಂದ ಕತೆಯನ್ನು ಹೇಳಲಿರುವ ಈ ಚಿತ್ರ
ಸಿನಿವಾರ್ತೆ
ಶಿವರಾಜ್ ಕುಮಾರ್ ನಟನೆಯ ‘ಸರ್ವೈವರ್’ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ಶಿವಣ್ಣ ಅವರು ಮೂತ್ರಕೋಶ ಕ್ಯಾನ್ಸರ್‌ನಿಂದ ಗೆದ್ದು ಬಂದ ಕತೆಯನ್ನು ಹೇಳಲಿರುವ ಈ ಚಿತ್ರದ ಚಿತ್ರೀಕರಣ ಇಂದಿನಿಂದ ಆರಂಭವಾಗಲಿದೆ.
ಗೀತಾ ಶಿವರಾಜ್‌ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪ್ರದೀಪ್ ಕೆ ಶಾಸ್ತ್ರಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ಎ ಸೂಪರ್‌ಸ್ಟಾರ್ ಡಾಕ್ಯುಮೆಂಟರಿ’ ಎಂಬ ಟ್ಯಾಗ್‌ಲೈನ್ ಇರುವ ಈ ಚಿತ್ರದಲ್ಲಿ ಶಿವಣ್ಣ ಅವರು ತಮ್ಮ ಪಾತ್ರದಲ್ಲಿ ತಾವೇ ಕಾಣಿಸಿಕೊಳ್ಳುತ್ತಿದ್ದಾರೆ.