ನನ್ನ ದರ್ಶನ್‌ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ: ಶಿವಣ್ಣ

| Published : Oct 11 2023, 12:45 AM IST

ನನ್ನ ದರ್ಶನ್‌ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ: ಶಿವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲವೊಮ್ಮೆ ಏನೋ ಭಿನ್ನಾಭಿಪ್ರಾಯಗಳು ಮೂಡುತ್ತವೆ. ಹಾಗಂತ ಅದೇನು ವೈರತ್ವವಾ? ಬರೀ ಮಿಸ್‌ ಕಮ್ಯುನಿಕೇಷನ್ ಅಷ್ಟೆ. ಅದನ್ನೇ ವೈರತ್ವ ಎಂದುಕೊಳ್ಳಬಾರದು. ದರ್ಶನ್ ಹಾಗೂ ನನ್ನ ನಡುವೆ ಸದ್ಯ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ವೈರತ್ವ ಇಲ್ಲವೇ ಇಲ್ಲ’ ಎಂದು ಶಿವರಾಜ್‌ ಕುಮಾರ್‌ ಹೇಳಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ ‘ಮನುಷ್ಯ, ಫ್ಯಾಮಿಲಿ ಅಂದಮೇಲೆ ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳು ಸಹಜ. ಆ ಬಿರುಕನ್ನು ದೊಡ್ಡದು ಮಾಡಬಾರದು. ಕೆಲವೊಮ್ಮೆ ಏನೋ ಭಿನ್ನಾಭಿಪ್ರಾಯಗಳು ಮೂಡುತ್ತವೆ. ಹಾಗಂತ ಅದೇನು ವೈರತ್ವವಾ? ಬರೀ ಮಿಸ್‌ ಕಮ್ಯುನಿಕೇಷನ್ ಅಷ್ಟೆ. ಅದನ್ನೇ ವೈರತ್ವ ಎಂದುಕೊಳ್ಳಬಾರದು. ದರ್ಶನ್ ಹಾಗೂ ನನ್ನ ನಡುವೆ ಸದ್ಯ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ವೈರತ್ವ ಇಲ್ಲವೇ ಇಲ್ಲ’ ಎಂದು ಶಿವರಾಜ್‌ ಕುಮಾರ್‌ ಹೇಳಿದ್ದಾರೆ. ಖಾಸಗಿ ಸಂದರ್ಶನದಲ್ಲಿ ಈ ಪ್ರತಿಕ್ರಿಯೆ ನೀಡಿದ ಅವರು, ‘ದರ್ಶನ್ ಅವರನ್ನು ಚಿಕ್ಕಂದಿನಿಂದ ನೋಡಿದ್ದೀನಿ. ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಇವತ್ತು ಟಾಪ್ ಹೀರೊ ಆಗಿದ್ದಾರೆ. ಅವರೂ ಮನುಷ್ಯನೇ ಅಲ್ಲವಾ? ಹೀಗಾಗಿ ಏನೋ ಸಣ್ಣಪುಟ್ಟ ತಕರಾರು ಬಂದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ’ ಎಂದೂ ಶಿವಣ್ಣ ಹೇಳಿದ್ದಾರೆ.