ಸಾರಾಂಶ
- ಪ್ರಿಯಾ ಕೆರ್ವಾಶೆ
- ವಿಷ್ಣು ಪ್ರಿಯ ಅನ್ನೋ ಟೈಟಲ್ ಹೀರೋ ಹೀರೋಯಿನ್ ಹೆಸರು ಮಾತ್ರನಾ, ಇನ್ನೂ ಏನನ್ನಾದ್ರೂ ಕನ್ವೇ ಮಾಡುತ್ತಾ?
ವಿಷ್ಣು ಸರ್ ಮೇಲಿನ ಪ್ರೀತಿಗಾಗಿ ಈ ಟೈಟಲ್ ಇಟ್ಟಿದ್ದು. ಇನ್ನೊಂದು ಕಡೆ ಸಿನಿಮಾದಲ್ಲಿರುವುದು ವಿಷ್ಣು ಹಾಗೂ ಪ್ರಿಯಾ ನಡುವಿನ ಲವ್ ಸ್ಟೋರಿ. ಆ ಕಾರಣವೂ ಇದೆ. ಜೊತೆಗೆ ಇದು ದೇವರ ಹೆಸರೂ ಹೌದು.
- ಸಿನಿಮಾದ ಪಾತ್ರವನ್ನು ಚಾಲೆಂಜಿಂಗ್ ಆಗಿ ತಗೊಂಡು ಆ್ಯಕ್ಟ್ ಮಾಡಿದ್ರಂತೆ..
ಹೌದು, ಈ ಪ್ರಾಜೆಕ್ಟ್ ಶುರು ಮಾಡಿದ ಆರಂಭದಲ್ಲಿ ಕೆಲವು ನಿರ್ದೇಶಕರು, ನಿರ್ಮಾಪಕರಿಗೆ ಕಥೆ ಹೇಳಲಾಗಿತ್ತು. ಆಗ ಅವರು ಶ್ರೇಯಸ್ ಇಷ್ಟು ಹೆವೀ ಸಬ್ಜೆಕ್ಟ್‌ನ ಮಾಡ್ತಾನ ಅಂತ ಅನುಮಾನದಲ್ಲಿ ಕೇಳಿದ್ರು. ನಂಗೆ ಟ್ರಿಗರ್ ಆಯ್ತು. ಆದರೆ ಸಿನಿಮಾ ಶೂಟಿಂಗ್ ಮಾಡ್ತಿದ್ದಾಗ ಆ ಇಂಟೆನ್ಸಿಟಿ ಏನು ಅನ್ನೋದು ಗೊತ್ತಾಗ್ತಾ ಹೋಯ್ತು. ಆದರೂ ನಾನು ಧೃತಿಗೆಡದೆ, ಇದು ನನ್ನೊಳಗಿನ ನಟನನ್ನು ಹೊರ ಜಗತ್ತಿಗೆ ತೋರಿಸುವ ಒಂದೊಳ್ಳೆ ಚಾನ್ಸ್ ಅಂದುಕೊಂಡು ನಟಿಸಿದೆ. ಜೊತೆಗೆ ಇಂಥಾ ಮಾತುಗಳೂ ಇನ್ನಷ್ಟು ತೀವ್ರವಾಗಿ ನಟಿಸುವಂತೆ ಪ್ರಚೋದಿಸಿದವು. ಇದರಿಂದ ಅರಿತ ಪಾಠ ಅಂದರೆ ಜನ ನಿಮ್ಮ ಬಗ್ಗೆ ಡೌಟ್ ಪಟ್ಟುಕೊಂಡರೆ ಸಿಟ್ಟು ಮಾಡಿಕೊಳ್ಳಬಾರದು, ಅವರಿಗೆ ಪ್ರೂವ್ ಮಾಡಿ ತೋರಿಸಬೇಕು. ಆ ಹುಮ್ಮಸ್ಸಿರಬೇಕು. ನೀನು ಪ್ರೊಡ್ಯೂಸರ್ ಮಗ, ಅದು ಇದು ಅಂತೆಲ್ಲ ಜನ ಮಾತಾಡುವಾಗಲೂ, ನಾನಂದುಕೊಳ್ಳೋದು, ನೀನ್ ಮಾತಾಡು ಗುರೂ, ಮಾತಾಡ್ತನೇ ಇರು, ನಾನು ಕೆಲ್ಸದಲ್ಲಿ ತೋರಿಸ್ತೀನಿ ಅಂತ. ಅದು ನನ್ನ ಸ್ವಭಾವ.
- ಸಿನಿಮಾ ಹೈಲೈಟ್?
ಸಿನಿಮಾಟೋಗ್ರಫಿ, 90ರ ದಶಕದ ಕತೆ, ಚಿಕ್ಕಮಗಳೂರು ಕೇರಳದಲ್ಲಿ ದಟ್ಟ ಹಸಿರಿನ ನಡುವೆ ಶೂಟ್ ಆಗಿರುವ ಸಿನಿಮಾ. ವಿಕೆ ಪ್ರಕಾಶ್ ದೊಡ್ಡ ಡೈರೆಕ್ಟರ್. ಅವರ ಇಂಟೆನ್ಸ್ ವರ್ಕ್ ಸಿನಿಮಾದಲ್ಲಿ ಎದ್ದು ಕಾಣುತ್ತೆ. ಹಾಗೇ ಪ್ರಿಯಾ ವಾರಿಯರ್ ಇದ್ದಾರೆ. ಲುಕ್ ಆ್ಯಂಡ್ ಫೀಲ್ ಸಿನಿಮಾ. ಇದು ರೆಗ್ಯುಲರ್ ಕಮರ್ಷಿಯಲ್ ಸಿನಿಮಾ ಅಲ್ಲ. ಆರ್ಟಿಸ್ಟಿಕ್ ಸಿನಿಮಾನೂ ಅಲ್ಲ. ಅವೆರಡರ ನಡುವೆ ಇರುವ ಚಿತ್ರ.
- ಪ್ರಿಯಾ ವಾರಿಯರ್ ಜೊತೆ ನಟಿಸಿದ್ದು?
ಸೆಟ್‌ಗೆ ಬಂದಾಗ ಆ್ಯಕ್ಷನ್ ಅನ್ನೋ ಮುಂಚೆ ಪರಸ್ಪರ ಗೌರವ ಎಲ್ಲರಿಗೂ ಇರುತ್ತೆ. ರೋಲ್ ಅಂದಾಕ್ಷಣ ನನ್ನೆದುರು ಯಾರೇ ಇದ್ರೂ ನಾನು ಹೀರೋನೆ. ನನ್ನ ನಾನು ಬಿಟ್ಕೊಡಲ್ಲ. ನನ್ನ ಬೆಸ್ಟ್ ಪರ್ಫಾರ್ಮೆನ್ಸ್ ನೀಡ್ತೀನಿ. ಹೀರೋಯಿನ್ ಪ್ರಿಯಾ ವಾರಿಯರ್ ಇರಲಿ, ಯಾರೇ ಇರಲಿ, ಎಂಡ್ ಆಫ್ ದಿ ಡೇ ನಾನು ಹೀರೋನೆ ಅಲ್ವಾ? ನನ್ನ ಕೆಲಸ ನಾನು ಮಾಡ್ತೀನಿ ಅಷ್ಟೇ.
- ಸಿನಿಮಾದ್ದು ಲವ್ ಸ್ಟೋರಿ ಅಲ್ವಾ? ರಿಯಲ್ ಲೈಫಲ್ಲಿ ಲವ್ವಲ್ಲಿ ಬಿದ್ದಿದ್ದು?
ಇಲ್ಲ ಅಂದರೆ ಸುಳ್ಳಾಗುತ್ತೆ. ಆದರೆ ಈಗಿಲ್ಲ ಅಷ್ಟೇ. ನನ್ನ ಪ್ರಕಾರ ಬ್ರೇಕಪ್ ಆದಾಗ ಹುಡುಗೀರನ್ನು ಬ್ಲೇಮ್ ಮಾಡಬಾರದು. ನಿಜವಾಗಿ ಪ್ರೀತಿಸುವ ಹುಡುಗ, ಹುಡುಗಿ ಬೈದ್ರೂ ಬಿಟ್ಟು ಹೋದ್ರೂ ಹುಡುಗಿ ಬಗ್ಗೆ ಮಾತಾಡಲ್ಲ. ಮುಖದಲ್ಲಿ ನಗು ಇಟ್ಕೊಂಡು ತಲೆ ತಗ್ಗಿಸಿಕೊಂಡು ಕೆಲಸ ಮಾಡ್ತಾ ಹೋಗ್ತಾನೆ. ಅದೇ ಲೈಫ್.-
ಸಿನಿಮಾ ಬಗ್ಗೆ ಎಕ್ಸ್‌ಪೆಕ್ಟೇಶನ್ಸ್?
ಒಬ್ಬ ಕಲಾವಿದನಾಗಿ ಎಲ್ಲರ ಮನಸ್ಸನ್ನು ಗೆಲ್ಲುವ ಆತ್ಮವಿಶ್ವಾಸ ಇದೆ.