ಸಾರಾಂಶ
ಕಿನ್ನಾಲ್ ರಾಜ್ ನಿರ್ದೇಶನದ ಸಿಂಹ ರೂಪಿಣಿ ಚಿತ್ರದ ಟೀಸರ್ ಬಿಡುಗಡೆ ಆಗಿದೆ.
ಸಿನಿವಾರ್ತೆ
‘ಸಿಂಹರೂಪಿಣಿ’ ಚಿತ್ರದ ಪಾತ್ರಧಾರಿಗಳನ್ನು ಪರಿಚಯಿಸುವ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಆಗಿದೆ. ನಿರೂಪಕಿ ಅಂಕಿತಾ ಗೌಡ ಈ ಚಿತ್ರದ ಮೂಲಕ ನಾಯಕಿಯಾಗಿದ್ದಾರೆ.
ಯಶಸ್ವಿನಿ ಸಿದ್ದೇಗೌಡ ದೇವಿಯಾಗಿ, ರವಿ ಬಸ್ರೂರು ಪುತ್ರಿ ಖುಷಿ ಬಸ್ರೂರು ಬಾಲ ದೇವಿಯಾಗಿ ನಟಿಸಿರುವ ಈ ಚಿತ್ರವನ್ನು ಕಿನ್ನಾಳ್ ರಾಜ್ ನಿರ್ದೇಶಿಸಿದ್ದು, ಕೆ ಎಂ ನಂಜುಡೇಶ್ವರ ಕತೆ ಬರೆದು ನಿರ್ಮಾಣ ಮಾಡಿದ್ದಾರೆ.
ಕಿನ್ನಾಳ್ ರಾಜ್, ‘ಇದು ಶ್ರೀ ಮಾರಮ್ಮ ದೇವಿ ಕುರಿತ ಕತೆ ಹೇಳುವ ಸಿನಿಮಾ’ ಎಂದರು. ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ದೇಶಕ ಜಡೇಕುಮಾರ್ ಹಂಪಿ ಚಿತ್ರತಂಡಕ್ಕೆ ಶುಭ ಕೋರಿದರು.