ಗಾಯಕ ಹನುಮಂತು ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್‌ಬಾಸ್‌ 11ನೇ ಸೀಸನ್‌ ವಿಜೇತ

| N/A | Published : Jan 27 2025, 09:54 AM IST

Hanumantha

ಸಾರಾಂಶ

ಕನ್ನಡ ಕಿರುತೆರೆಯ ರಿಯಾಲಿಟಿ ಶೋ ‘ಬಿಗ್‌ ಬಾಸ್’ 11ನೇ ಸೀಸನ್‌ನಲ್ಲಿ ಕುರಿಗಾಹಿ ಹಾಗೂ ಗಾಯಕ ಹನುಮಂತ ಅವರು ವಿಜಯಿಯಾಗಿದ್ದಾರೆ. ಭಾನುವಾರ ನಡೆದ ಗ್ರಾಂಡ್‌ ಫಿನಾಲೆಯಲ್ಲಿ ನಿರೂಪಕ ನಟ ಸುದೀಪ್‌ ಅವರು ವಿಜೇತರನ್ನು ಘೋಷಣೆ ಮಾಡಿದರು.

  ಬೆಂಗಳೂರು : ಕನ್ನಡ ಕಿರುತೆರೆಯ ರಿಯಾಲಿಟಿ ಶೋ ‘ಬಿಗ್‌ ಬಾಸ್’ 11ನೇ ಸೀಸನ್‌ನಲ್ಲಿ ಕುರಿಗಾಹಿ ಹಾಗೂ ಗಾಯಕ ಹನುಮಂತ ಅವರು ವಿಜಯಿಯಾಗಿದ್ದಾರೆ. ಭಾನುವಾರ ನಡೆದ ಗ್ರಾಂಡ್‌ ಫಿನಾಲೆಯಲ್ಲಿ ನಿರೂಪಕ ನಟ ಸುದೀಪ್‌ ಅವರು ವಿಜೇತರನ್ನು ಘೋಷಣೆ ಮಾಡಿದರು.

ತ್ರಿವಿಕ್ರಂ ರನ್ನರ್ ಅಪ್‌ ಎನಿಸಿಕೊಂಡರೆ, ದ್ವಿತಿಯ ರನ್ನರ್‌ ಅಪ್‌ ಆಗಿ ರಜತ್ ಕಿಶನ್ ಹಾಗೂ ತೃತೀಯ ರನ್ನರ್‌ ಅಪ್‌ ಆಗಿ ನಟಿ ಮೋಕ್ಷಿತಾ ಪೈ ಅವರು ಸಂಭ್ರಮಿಸಿದ್ದಾರೆ. ಮೊದಲ ಸ್ಥಾನ ಪಡೆದ ಹನುಮಂತ ಅವರಿಗೆ ಟ್ರೋಫಿ ಜೊತೆಗೆ 50 ಲಕ್ಷ ರು. ನಗದು ಬಹುಮಾನ ಹಾಗೂ ಕಾರು ಉಡುಗೊರೆ ನೀಡಲಾಗುವುದು ಎನ್ನಲಾಗಿದೆ. 120 ದಿನಗಳನ್ನು ಸಂಪನ್ನಗೊಳಿಸಿದ ಈ ಶೋ, ನಟ ಸುದೀಪ್‌ ನಿರೂಪಣೆಯ ಕೊನೆಯ ಬಿಗ್‌ ಬಾಸ್ ಕಾರ್ಯಕ್ರಮವಾಗಿರಲಿದೆ.