ಕಾಲಿವುಡ್‌ನಲ್ಲಿ ಚರ್ಚೆಯಲ್ಲಿರುವ ಅಜಿತ್‌ ನಟನೆಯ 64ನೇ ಸಿನಿಮಾಕ್ಕೆ ‘ಕೆಜಿಎಫ್‌’ ಬೆಡಗಿ ಶ್ರೀನಿಧಿ ಶೆಟ್ಟಿ ನಾಯಕಿಯಾಗುವುದು ಬಹುತೇಕ ಖಚಿತವಾಗಿದೆ. ನಾನಿಯ ಜೊತೆಗೆ ‘ಹಿಟ್‌ 3’ ಸಿನಿಮಾದ ಯಶಸ್ಸಿನಿಂದ ಬೀಗುತ್ತಿರುವ ಶ್ರೀನಿಧಿಗೆ ಮತ್ತೊಂದು ಅವಕಾಶ ಕೈ ಬೀಸಿ ಕರೆದಂತಾಗಿದೆ.

 ಸಿನಿವಾರ್ತೆ : ಕಾಲಿವುಡ್‌ನಲ್ಲಿ ಚರ್ಚೆಯಲ್ಲಿರುವ ಅಜಿತ್‌ ನಟನೆಯ 64ನೇ ಸಿನಿಮಾಕ್ಕೆ ‘ಕೆಜಿಎಫ್‌’ ಬೆಡಗಿ ಶ್ರೀನಿಧಿ ಶೆಟ್ಟಿ ನಾಯಕಿಯಾಗುವುದು ಬಹುತೇಕ ಖಚಿತವಾಗಿದೆ. ನಾನಿಯ ಜೊತೆಗೆ ‘ಹಿಟ್‌ 3’ ಸಿನಿಮಾದ ಯಶಸ್ಸಿನಿಂದ ಬೀಗುತ್ತಿರುವ ಶ್ರೀನಿಧಿಗೆ ಮತ್ತೊಂದು ಅವಕಾಶ ಕೈ ಬೀಸಿ ಕರೆದಂತಾಗಿದೆ.

‘ಗುಡ್‌ ಬ್ಯಾಡ್‌ ಅಗ್ಲಿ’ ಸಿನಿಮಾ ನಿರ್ದೇಶಕನ ಹೊಸ ಸಿನಿಮಾಕ್ಕೆ ಅಜಿತ್‌ ಸೈನ್‌ ಮಾಡಿದ್ದು, ನವೆಂಬರ್‌ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಇದಕ್ಕೆ ಕನ್ನಡದ ಹುಡುಗಿ ಶ್ರೀನಿಧಿ ಶೆಟ್ಟಿ ನಾಯಕಿಯಾಗುವ ಸಾಧ್ಯತೆ ದಟ್ಟವಾಗಿದೆ. ಇದರ ಜೊತೆಗೆ ಅಜಿತ್‌ಗೂ ಶ್ರೀನಿಧಿಗೂ ಇರುವ 22 ವರ್ಷಗಳ ವಯಸ್ಸಿನ ಅಂತರವೂ ಚರ್ಚೆಯಲ್ಲಿದೆ.