ಸಾರಾಂಶ
ಬಿಲ್ಲ ರಂಗ ಬಾಷ ಸಿನಿಮಾಕ್ಕಾಗಿ ಬಾಡಿ ಬಿಲ್ಡ್ ಮಾಡಿದ್ದಾರೆ ಸುದೀಪ್
ಅನೂಪ್ ಭಂಡಾರಿ ನಿರ್ದೇಶನದ, ಕಿಚ್ಚ ಸುದೀಪ್ ನಟನೆಯ ‘ಬಿಲ್ಲ ರಂಗ ಬಾಷ’ ಸಿನಿಮಾ ಶೀಘ್ರ ಸೆಟ್ಟೇರುವ ಸೂಚನೆ ಸಿಕ್ಕಿದೆ. ಈ ಸಿನಿಮಾದ ಪಾತ್ರಕ್ಕಾಗಿ ಕಳೆದ ಕೆಲವು ತಿಂಗಳಿಂದ ವರ್ಕೌಟ್ ಮಾಡುತ್ತಿರುವ ಸುದೀಪ್ ಇದೀಗ ಬಾಡಿ ಬಿಲ್ಡ್ ಮಾಡಿರುವ ಫೋಟೋವನ್ನು ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
‘ಏ.16’ ಎಂಬ ದಿನಾಂಕವನ್ನೂ ಪ್ರಕಟಿಸಿದ್ದಾರೆ. ಆ ದಿನ ‘ಬಿಲ್ಲ ರಂಗ ಬಾಷ’ ಸೆಟ್ಟೇರಲಿದೆ ಎಂಬುದು ಸದ್ಯದ ನಂಬಿಕೆ. ಈ ಸಿನಿಮಾವನ್ನು ಚೈತನ್ಯ ರೆಡ್ಡಿ ಹಾಗೂ ನಿರಂಜನ ರೆಡ್ಡಿ ನಿರ್ಮಿಸುತ್ತಿದ್ದಾರೆ. ಇದು ಕ್ರಿ.ಶ 2209ರ ಕಾಲಘಟ್ಟದಲ್ಲಿ ನಡೆಯುವ ಕಥೆ. ವೈಜ್ಞಾನಿಕತೆ ಬೆರೆಸಿದ ಫ್ಯಾಂಟಸಿ ಕಥೆಯನ್ನು ಅನೂಪ್ ಭಂಡಾರಿ ಈ ಸಿನಿಮಾದಲ್ಲಿ ನಿರೂಪಿಸಲಿದ್ದಾರೆ.