ರಿಪ್ಲೈ ಕೊಡಿ ಬಾಸ್‌ ಎಂದ ಅಭಿಮಾನಿಗಾಗಿ ಮರುಗಿದ ಕಿಚ್ಚ ಸುದೀಪ್

| Published : Apr 05 2024, 01:07 AM IST / Updated: Apr 05 2024, 06:00 AM IST

ರಿಪ್ಲೈ ಕೊಡಿ ಬಾಸ್‌ ಎಂದ ಅಭಿಮಾನಿಗಾಗಿ ಮರುಗಿದ ಕಿಚ್ಚ ಸುದೀಪ್
Share this Article
  • FB
  • TW
  • Linkdin
  • Email

ಸಾರಾಂಶ

ರಿಪ್ಲೈ ಕೊಡಿ ಬಾಸ್‌ ಎಂದಿದ್ದ ಅಭಿಮಾನಿಗಾಗಿ ಕಿಚ್ಚ ಸುದೀಪ್‌ ಮರುಗಿದ್ದಾರೆ, ಇದಕ್ಕೆ ಕಾರಣ ಏನು?

 ಸಿನಿವಾರ್ತೆ

ಅಭಿಮಾನಿಯೊಬ್ಬನಿಗಾಗಿ ಮರುಗಿ ಕಿಚ್ಚ ಸುದೀಪ್ ಮಾಡಿರುವ ಟ್ವೀಟ್ ಇದೀಗ ಸುದೀಪ್ ಅಭಿಮಾನಿಗಳಲ್ಲಿ ಕಣ್ಣೀರು ತರಿಸಿದೆ.

ಹಲವು ದಿನಗಳ ಹಿಂದೆ, ‘ಬಾಸ್‌ ಒಂದೇ ಒಂದು ರಿಪ್ಲೈ ಮಾಡಿ’ ಎಂದು ಸುದೀಪ್‌ ಅಭಿಮಾನಿ ಜಮಖಂಡಿ ಮೂಲದ ನಿಖಿಲ್‌ ಎಂಬ 22 ವರ್ಷದ ಯುವಕ ಟ್ವೀಟ್ ಮಾಡಿದ್ದ. ಆ ಅಭಿಮಾನಿ ಇದೀಗ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ.

 ಆತ, ‘ರಿಪ್ಲೈ ಮಾಡಿ ಬಾಸ್‌’ ಎಂದ ಪೋಸ್ಟ್‌ ಅನ್ನೇ ರೀಟ್ವೀಟ್‌ ಮಾಡಿ ಸುದೀಪ್‌ ಸಂತಾಪ ಸೂಚಿಸಿದ್ದಾರೆ. ‘ಈ ಸುದ್ದಿ ಕೇಳಲು ನಿಜಕ್ಕೂ ಬೇಸರವಾಗುತ್ತಿದೆ. ಈ ಕಿರಿಯ ಸಹೋದರನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಸುದೀಪ್‌ ಬರೆದಿದ್ದಾರೆ. 

ಈಗ ಸುದೀಪ್‌ ರಿಪ್ಲೈ ಮಾಡಿದ್ದು ನೋಡಿ ನಿಖಿಲ್‌ ಸ್ನೇಹಿತರು, ‘ಬಾಸ್‌ ರಿಪ್ಲೈ ಕೊಟ್ಟಿದ್ದಾರೆ, ನೋಡೋ..’ ಎಂದು ಕಣ್ಣೀರಾಗಿದ್ದಾರೆ. ಸುದೀಪ್ ಅಭಿಮಾನಿಗಳೆಲ್ಲಾ ಬೇಸರ ವ್ಯಕ್ತಪಡಿಸಿದ್ದಾರೆ.