ಸಾರಾಂಶ
ಫೈನಲ್ ಆಗಿ ನೀವು ಒಂದು ವಯಸ್ಸಿಗೆ ಕಾಲಿಟ್ಟಿದ್ದೀರಿ. ವಯಸ್ಸಿಗೆ ಕಾಲಿಡೋದು ದೊಡ್ದಲ್ಲ ಮಂಜು, ವಯಸ್ಸನ್ನ ಒಪ್ಕೊಳ್ಳಿ’ - ಕಿಚ್ಚ ಸುದೀಪ್.
ಸಿನಿವಾರ್ತೆ
‘ವಿಷ್ಣು ಪ್ರಿಯ ಸಿನಿಮಾದ ರೊಮ್ಯಾಂಟಿಕ್ ಹಾಡು ತೆರೆ ಮೇಲೆ ಬರುವಾಗ ಕೆ. ಮಂಜು ನಾಚ್ಕೊಳ್ತಿದ್ರು. ಅದರಲ್ಲೊಂದು ಶಾಟ್‌ನಲ್ಲಂತೂ ಟೆನ್ಶನ್ ಆದರು. ಮಂಜು, ನಿಮ್ಮ ಮಗ ಅದನ್ನು ಪರದೆ ಮೇಲೆ ಮಾಡ್ತಿದ್ದಾರೆ. ನೀವು ಟೆನ್ಶನ್ ಮಾಡ್ಕೋಬೇಡಿ. ಫೈನಲ್ ಆಗಿ ನೀವು ಒಂದು ವಯಸ್ಸಿಗೆ ಕಾಲಿಟ್ಟಿದ್ದೀರಿ. ವಯಸ್ಸಿಗೆ ಕಾಲಿಡೋದು ದೊಡ್ದಲ್ಲ ಮಂಜು, ವಯಸ್ಸನ್ನ ಒಪ್ಕೊಳ್ಳಿ’.
- ಹೀಗೆ ನಿರ್ಮಾಪಕ ಕೆ ಮಂಜು ಅವರ ಕಾಲೆಳೆದದ್ದು ಕಿಚ್ಚ ಸುದೀಪ್.
ಕೆ. ಮಂಜು ನಿರ್ಮಾಣದ, ವಿ.ಕೆ. ಪ್ರಕಾಶ್ ನಿರ್ದೇಶನದ, ಶ್ರೇಯಸ್ ಮಂಜು- ಪ್ರಿಯಾ ವಾರಿಯರ್ ನಟಿಸಿರುವ ‘ವಿಷ್ಣು ಪ್ರಿಯ’ ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್, ‘ಕೆ. ಮಂಜು ಇದೀಗ ತನ್ನ ಮಗನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅವರಲ್ಲಿ ಮಗನ ನಟನೆ ಬಗ್ಗೆ ತೃಪ್ತಿ ಇದೆ. ಗ್ಯಾಂಗ್‌ಸ್ಟರ್ ಸ್ಟೋರಿಗಳ ನಡುವೆ ಲವ್‌ಸ್ಟೋರಿ ಬರುತ್ತಿದೆ. ವಿಷ್ಣುಪ್ರಿಯ ಅಪರೂಪದ ಪ್ರೇಮಕಥೆಯಂತೆ ಭಾಸವಾಗುತ್ತಿದೆ’ ಎಂದು ಹೇಳಿದರು. ನಿರ್ಮಾಪಕ ಮಂಜು, ‘ವಿಷ್ಣುವರ್ಧನ್ ಅವರಿಂದ ಈ ಮಟ್ಟಕ್ಕೆ ಬೆಳೆಯುವುದು ಸಾಧ್ಯವಾಯಿತು’ ಎಂದು ಭಾವುಕರಾದರು. ಭಾರತಿ ವಿಷ್ಣುವರ್ಧನ್, ನಾಗತಿಹಳ್ಳಿ ಚಂದ್ರಶೇಖರ್, ಎಸ್ ನಾರಾಯಣ್, ನಾಯಕ ಶ್ರೇಯಸ್ ಮಂಜು ಹಾಜರಿದ್ದರು. ಈ ಸಿನಿಮಾ ಫೆಬ್ರವರಿ 21ರಂದು ಬಿಡುಗಡೆಯಾಗಲಿದೆ.