ಸಾರಾಂಶ
ಮದನ್ ಪಟೇಲ್ ನಟಿಸಿ, ನಿರ್ಮಿಸಿರುವ ತಮಟೆ ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆ ಆಗಿವೆ.
ಸಿನಿವಾರ್ತೆ
ಮದನ್ ಪಟೇಲ್ ನಟನೆ, ನಿರ್ಮಾಣದ ‘ತಮಟೆ’ ಚಿತ್ರದ ಟೀಸರ್, ಹಾಡನ್ನು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿ ಮಲ್ಲೇಪುರಂ ಜಿ ವೆಂಕಟೇಶ್ ಬಿಡುಗಡೆ ಮಾಡಿದರು. ಮಯೂರ್ ಪಟೇಲ್ ನಿರ್ದೇಶನದ ಈ ಚಿತ್ರ ನ.29ಕ್ಕೆ ತೆರೆಗೆ ಬರುತ್ತಿದೆ.
‘ಕಾದಂಬರಿಯೊಂದು ಸಿನಿಮಾ ಆಗುತ್ತಿರುವುದು ಸಂತೋಷದ ಸಂಗತಿ. ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಇಂಥ ಸಿನಿಮಾಗಳ ಸಂಖ್ಯೆ ಹೆಚ್ಚಾಗಬೇಕು. ‘ತಮಟೆ’ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲಲಿ’ ಎಂದು ಶುಭ ಹಾರೈಸಿದರು ಮಲ್ಲೇಪುರಂ ಜಿ ವೆಂಕಟೇಶ್. ಮದನ್ ಪಟೇಲ್, ‘ತಮಟೆ ವಾದ್ಯಗಾರನ ಜೀವನ ಆಧರಿಸಿದ ಸಿನಿಮಾ ಇದು. ನಾನು ಇಲ್ಲಿ ನಟನೆ, ನಿರ್ಮಾಣದ ಜತೆಗೆ ಚಿತ್ರಕಥೆ ಹಾಗೂ ಸಂಗೀತ ಕೂಡ ನನ್ನದೆ. ಹಲವಾರು ಚಿತ್ರೋತ್ಸವಗಳಲ್ಲಿ ಈಗಾಗಲೇ ನಮ್ಮ ಚಿತ್ರ ಪ್ರದರ್ಶನಗೊಂಡಿದೆ. ಸಿನಿಮಾಗಳ ಮೂಲಕ ಇಂಥ ಕತೆಗಳನ್ನು ಹೇಳುವ ಅಗತ್ಯ ಇದೆ’ ಎಂದರು. ಚಿತ್ರದಲ್ಲಿ ನಟಿಸಿರುವ ತೇಜಸ್ವಿನಿ ಇದ್ದರು.