ಸಾಯಿ ಧನ್ಸಿಕಾ ಜೊತೆಗೆ ತಮಿಳು ನಟ ವಿಶಾಲ್‌ ನಿಶ್ಚಿತಾರ್ಥ

| N/A | Published : Aug 30 2025, 12:48 PM IST

sai dhanshika and vishal engagement

ಸಾರಾಂಶ

ತಮಿಳು ನಟ ವಿಶಾಲ್‌ 48ನೇ ಹರೆಯದಲ್ಲಿ ಬಹುಕಾಲದ ಗೆಳತಿ, ಸಿನಿಮಾ ನಟಿ ಸಾಯಿ ಧನ್ಸಿಕಾ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

 ಸಿನಿವಾರ್ತೆ

ತಮಿಳು ನಟ ವಿಶಾಲ್‌ 48ನೇ ಹರೆಯದಲ್ಲಿ ಬಹುಕಾಲದ ಗೆಳತಿ, ಸಿನಿಮಾ ನಟಿ ಸಾಯಿ ಧನ್ಸಿಕಾ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಚೆನ್ನೈಯಲ್ಲಿ ವಿಶಾಲ್‌ ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾರೆಯರಿಬ್ಬರೂ ಉಂಗುರ ಬದಲಿಸಿಕೊಂಡು ಸಂಬಂಧವನ್ನು ದೃಢೀಕರಿಸಿದರು.

ಈ ಹಿಂದೆ ಆ.29ರಂದು ವಿವಾಹವಾಗುತ್ತಿರುವುದಾಗಿ ವಿಶಾಲ್‌ ಹೇಳಿದ್ದರು. ಆದರೆ ಇದೀಗ ಮದುವೆಯ ಬದಲಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಮದುವೆಯ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.

Read more Articles on