ಸಾರಾಂಶ
ತಮಿಳು ಚಿತ್ರರಂಗದ ಜನಪ್ರಿಯ ನಟಿ ಐಶ್ವರ್ಯಾ ರಾಜೇಶ್ ಉತ್ತರಕಾಂಡ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಐಶ್ವರ್ಯ ರಾಜೇಶ್ ‘ಉತ್ತರಕಾಂಡ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಡಾಲಿ ಧನಂಜಯ ನಾಯಕನಾಗಿರುವ ಚಿತ್ರದಲ್ಲಿ ‘ದುರ್ಗಿ’ ಪಾತ್ರದಲ್ಲಿ ನಟಿಸುತ್ತಿದ್ದಾರೆ.
‘ದಿ ಗ್ರೇಟ್ ಇಂಡಿಯನ್ ಕಿಚನ್’, ‘ದಿ ವರ್ಲ್ಡ್ ಫೇಮಸ್ ಲವರ್’, ‘ವಡಾ ಚೆನ್ನೈ’, ‘ಕಾಕ ಮುಟ್ಟೈ’ ಸಿನಿಮಾಗಳಲ್ಲಿ ಐಶ್ವರ್ಯ ನಟಿಸಿ ಮೆಚ್ಚುಗೆ ಗಳಿಸಿದ್ದರು. ಪ್ರಸ್ತುತ ‘ಉತ್ತರಕಾಂಡ’ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ವಿಜಯಪುರದಲ್ಲಿ ನಡೆಯುತ್ತಿದೆ. ರೋಹಿತ್ ಪದಕಿ ನಿರ್ದೇಶನದ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ.