‘ನಾನು ಮೊದಲು ಕಲಿತ ಭಾಷೆ ತಮಿಳು. ನನ್ನ ಹೃದಯದಲ್ಲಿ ಚೆನ್ನೈಗೆ ವಿಶೇಷವಾದ ಸ್ಥಾನವಿದೆ.’- ಹೀಗೆ ಹೇಳಿದ್ದು ಕನ್ನಡ ಚಿತ್ರರಂಗದಿಂದ ಬಹುಭಾಷೆಗಳಿಗೆ ಹೋಗಿರುವ ನಟಿ ರಶ್ಮಿಕಾ ಮಂದಣ್ಣ

 ಸಿನಿವಾರ್ತೆ

‘ನಾನು ಮೊದಲು ಕಲಿತ ಭಾಷೆ ತಮಿಳು. ನನ್ನ ಹೃದಯದಲ್ಲಿ ಚೆನ್ನೈಗೆ ವಿಶೇಷವಾದ ಸ್ಥಾನವಿದೆ.’

- ಹೀಗೆ ಹೇಳಿದ್ದು ಕನ್ನಡ ಚಿತ್ರರಂಗದಿಂದ ಬಹುಭಾಷೆಗಳಿಗೆ ಹೋಗಿರುವ ನಟಿ ರಶ್ಮಿಕಾ ಮಂದಣ್ಣ. ಹೀಗೆ ಹೇಳುವ ಮೂಲಕ ಚೆನ್ನೈ ಮೇಲೆ ತಮಗೆ ಇರುವ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಧನುಷ್‌ ನಟನೆಯ ‘ಕುಬೇರ’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ರಶ್ಮಿಕಾ ಅವರು ಹೀಗೆ ಹೇಳಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ, ‘ಕುಬೇರ ಚಿತ್ರದ ಪ್ರಚಾರವನ್ನು ನಾವು ಚೆನ್ನೈನಲ್ಲಿ ಆರಂಭಿಸಿದ್ದೇವೆ. ನಮ್ಮ ತಂದೆ ಇಲ್ಲಿ ಕೆಲಸ ಮಾಡುತ್ತಿದ್ದರಿಂದ ನಾವು ಚೆನ್ನೈನ ಡಿಫೆನ್ಸ್ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದೇವು. ಆಗ ನಾನು ರಸ್ಕಿನ್‌ ಎನ್ನುವ ಶಾಲೆಯಲ್ಲಿ ಓದುತ್ತಿದ್ದೆ. ಆ ಶಾಲೆ ಈಗ ಇದಿಯೋ, ಇಲ್ಲವೋ ನನಗೆ ಗೊತ್ತಿಲ್ಲ. ನಾನು ಕಲಿತ ಮೊದಲ ಭಾಷೆ ತಮಿಳು. ನನ್ನ ಬಾಲ್ಯವನ್ನು ನಾನು ಇಲ್ಲಿ ಕಳೆದ ಕಾರಣ ನನ್ನ ಹೃದಯದಲ್ಲಿ ಚೆನ್ನೈಗೆ ವಿಶೇಷವಾದ ಸ್ಥಾನವಿದೆ. ನನಗೆ ಖುಷಿ ಇದೆ’ ಎಂದಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅವರ ಈ ಚೆನ್ನೈ ಮೇಲಿನ ಪ್ರೀತಿಯನ್ನು ತೋರುವ ಹೇಳಿಕೆ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ. ಕನ್ನಡಿಗರ ಟೀಕೆಗೂ ಕಾರಣವಾಗಿದೆ.