ತಾರೆಯರ ಟೆಂಪಲ್ ರನ್

| Published : Apr 02 2024, 01:01 AM IST / Updated: Apr 02 2024, 06:57 AM IST

Shubha Poonja

ಸಾರಾಂಶ

ತಾರೆಯರಾದ ಆರಾಧನಾ ಹಾಗೂ ಶುಭಾ ಪೂಂಜಾ ಟೆಂಪಲ್‌ ರನ್ ಮಾಡುತ್ತಿದ್ದಾರೆ. ಯಾವ ಟೆಂಪಲ್‌? ಏನ್ ಕಥೆ?

  ಸಿನಿವಾರ್ತೆ : ಸ್ಯಾಂಡಲ್‌ವುಡ್‌ ನಟಿಯರ ಟೆಂಪಲ್‌ ರನ್‌ ಶುರುವಾಗಿದೆ. ತನ್ನ ತಾಯಿ ಮಾಲಾಶ್ರೀ ಜೊತೆಗೆ ‘ಕಾಟೇರ’ ನಟಿ ಆರಾಧನಾ ಮುಂಬೈಗೆ ತೆರಳಿದ್ದಾರೆ. ಇಲ್ಲಿನ ಜಗತ್‌ಪ್ರಸಿದ್ಧ ಸಿದ್ಧಿ ವಿನಾಯಕ ದೇವಾಲಯಕ್ಕೆ ತೆರಳಿ ಗಣೇಶನ ದರ್ಶನ ಪಡೆದಿದ್ದಾರೆ. ‘ಕಾಟೇರ’ ರಿಲೀಸ್‌ಗೆ ಮೊದಲೂ ಈ ದೇವಾಲಯಕ್ಕೆ ಭೇಟಿ ನೀಡಿ ಸಿನಿಮಾ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದ್ದ ನಟಿ ಇದೀಗ ಸಿನಿಮಾ ಯಶಸ್ಸಿನ ಬಳಿಕ ಮತ್ತೆ ದೇವರ ದರ್ಶನ ಪಡೆದಿದ್ದಾರೆ.

ಇನ್ನೊಂದೆಡೆ ನಟಿ ಶುಭಾ ಪೂಂಜಾ ತನ್ನ ಪತಿ ಸುಮಂತ್‌ ಜೊತೆಗೆ ಕುಂಭಕೋಣಂನ ದೇಗುಲದ ದರ್ಶನ ಪಡೆದಿದ್ದಾರೆ. ದೇಗುಲದ ಮುಂದೆ ನಿಂತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅನೇಕ ದೇವಾಲಯಗಳ ಸಮೂಹವೇ ಕುಂಭಕೋಣಂನಲ್ಲಿದೆ. ಇದು ದೇಗುಲಗಳ ನಗರಿ ಎಂದೇ ಪ್ರಸಿದ್ಧ.