ಇಂದು ಡಾ. ರಾಜ್‌ಕುಮಾರ್‌ 95ನೇ ಹುಟ್ಟುಹಬ್ಬ

| Published : Apr 24 2024, 02:18 AM IST

ಇಂದು ಡಾ. ರಾಜ್‌ಕುಮಾರ್‌ 95ನೇ ಹುಟ್ಟುಹಬ್ಬ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು (ಏಪ್ರಿಲ್ 24) ಡಾ.ರಾಜ್‌ಕುಮಾರ್‌ ಅವರ 95ನೇ ಹುಟ್ಟುಹಬ್ಬ ನಡೆಯಲಿದೆ.

ಕನ್ನಡಪ್ರಭ ಸಿನಿವಾರ್ತೆ

ಇಂದು (ಏಪ್ರಿಲ್‌ 24) ನಟ ಸಾರ್ವಭೌಮ ಡಾ. ರಾಜ್‌ಕುಮಾರ್‌ ಅವರ 95ನೇ ಹುಟ್ಟುಹಬ್ಬ ಸಂಭ್ರಮ. ಪ್ರತಿ ವರ್ಷದಂತೆ ಈ ವರ್ಷವೂ ರಾಜ್‌ಕುಮಾರ್‌ ಜನ್ಮದಿನದ ಅಂಗವಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್‌ಕುಮಾರ್‌ ಸ್ಮಾರಕಕ್ಕೆ ಕುಟುಂಬ ವರ್ಗದವರಿಂದ ಪೂಜೆ ನಡೆಯಲಿದೆ.

ಈ ವರ್ಷವೂ ಸಾರ್ವಜನಿಕರು, ಸಿನಿಮಾ ಪ್ರೇಮಿಗಳು, ಅಭಿಮಾನಿಗಳು ಬೇರೆ ಬೇರೆ ಜಿಲ್ಲೆಗಳಿಂದ ಡಾ. ರಾಜ್‌ಕುಮಾರ್‌ ಅವರ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಸಾರ್ವಜನಿಕ ದರ್ಶನಕ್ಕಾಗಿ ಡಾ ರಾಜ್‌ ಅವರ ಸ್ಮಾರಕವನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಡಾ ರಾಜ್‌ಕುಮಾರ್‌ ಅವರ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳು ರಾಜ್‌ ಅವರ ಹುಟ್ಟುಹಬ್ಬವನ್ನು ಆಚರಿಸಲಿವೆ. ಈ ಸಂದರ್ಭದಲ್ಲಿ ಆರೋಗ್ಯ ಶಿಬಿರ, ಅನ್ನದಾನ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳು ನಡೆಯಲಿವೆ.