ಮೆಟ್‌ಗಾಲಾದಲ್ಲಿ ಗರ್ಭಿಣಿ ಕಿಯಾರಾ ಅದ್ವಾನಿ

| Published : May 07 2025, 12:53 AM IST

ಸಾರಾಂಶ

ಗರ್ಭಿಣಿಯಾಗಿರುವ ನಟಿ ಕಿಯಾರಾ ಮೆಟ್‌ ಗಾಲಾದ ರೆಡ್‌ ಕಾರ್ಪೆಟ್‌ನಲ್ಲಿ ಬೆಕ್ಕಿನ ಹೆಜ್ಜೆ ಹಾಕಿದ್ದಾರೆ.

ಕನ್ನಡಪ್ರಭ ಸಿನಿವಾರ್ತೆಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾದ ನಾಯಕಿ ಕಿಯಾರ ಅಡ್ವಾನಿ ಅಮೇರಿಕಾದ ನ್ಯೂಯಾರ್ಕ್‌ ಸಿಟಿಯಲ್ಲಿ ನಡೆಯುತ್ತಿರುವ ‘ಮೆಟ್ ಗಾಲಾ’ ಫ್ಯಾಶನ್‌ ಉತ್ಸವದಲ್ಲಿ ರ್‍ಯಾಂಪ್‌ ವಾಕ್‌ ಮಾಡಿದ್ದಾರೆ. ಆರು ತಿಂಗಳ ಗರ್ಭಿಣಿಯಾಗಿರುವ ಕಿಯಾರ ಅವರು ತಮ್ಮ ಹೊಟ್ಟೆಯ ಭಾಗದಲ್ಲಿ ಲವ್ ಸಿಂಬಲ್ ಇರುವ ಉಡುಗೆಯಲ್ಲಿ ಬೇಬಿ ಬಂಪ್ ಅನ್ನು ಸಂಭ್ರಮಿಸುವಂತೆ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದು ಜಗತ್ತಿನ ಗಮನ ಸೆಳೆದಿದೆ. ನ್ಯೂಯಾರ್ಕ್​ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್​ನಲ್ಲಿ ಪ್ರತೀ ವರ್ಷ ನಡೆಯುವ ಈ ಫ್ಯಾಶನ್‌ ಹಬ್ಬದಲ್ಲಿ ಜಗತ್ತಿನಾದ್ಯಂತದ ಸಿನಿಮಾ ತಾರೆಯರು, ಫ್ಯಾಶನ್‌ ದಿಗ್ಗಜರು ಪಾಲ್ಗೊಳ್ಳುತ್ತಾರೆ. ಈ ವರ್ಷ ಶಾರುಕ್ ಖಾನ್‌, ಪ್ರಿಯಾಂಕ ಚೋಪ್ರಾ ಭಾಗವಹಿಸಿದ್ದಾರೆ.