ಯುಕೆ ಲವ್ ಸ್ಟೋರಿ ಚಿತ್ರಕ್ಕೆ ಅಜಯ್‌ ರಾವ್‌ ಚಾಲನೆ

| Published : Feb 15 2024, 01:30 AM IST

ಯುಕೆ ಲವ್ ಸ್ಟೋರಿ ಚಿತ್ರಕ್ಕೆ ಅಜಯ್‌ ರಾವ್‌ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಯುಕೆ ಲವ್‌ಸ್ಟೋರಿ ಸಿನಿಮಾಕ್ಕೆ ಅಜಯ್ ರಾವ್ ಅವರಿಂದ ಚಾಲನೆ. ಸಿನಿಮಾ ಉತ್ತರ ಕರ್ನಾಟಕದ ಕತೆ ಹೊಂದಿದೆ.

ಕನ್ನಡಪ್ರಭ ಸಿನಿವಾರ್ತೆ

‘ಯುಕೆ ಲವ್‌ ಸ್ಟೋರಿ’ ಚಿತ್ರದ ಮುಹೂರ್ತದಲ್ಲಿ ಅಜಯ್‌ ರಾವ್ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ವಿಜಯ್‌ ಈ ಸಿನಿಮಾದ ನಿರ್ದೇಶಕರು. ಎಸ್.ಜೆ.ಸುರೇಶ್ ಚಿತ್ರ ನಿರ್ಮಾಣ ಮಾಡುವ ಜತೆಗೆ ಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕ ವಿಜಯ್‌, ‘ಉತ್ತರ ಕರ್ನಾಟಕದಲ್ಲಿ ನಡೆಯುವ ರಗಡ್ ಪ್ರೀತಿಯ ಕಥನವನ್ನು ಹೇಳಲು ಹೊರಟಿದ್ದೇವೆ. ಇದರ ಸಲುವಾಗಿ ಕಲಬುರಗಿಯ ಸಣ್ಣ ಹಳ್ಳಿಗೆ ಭೇಟಿ ನೀಡಿದ್ದೆ. ಸುಮಾರು ಆರು ತಿಂಗಳುಗಳ ಕಾಲ ಅಲ್ಲಿದ್ದು ಚಿತ್ರಕಥೆ ಸಿದ್ದಪಡಿಸಿದ್ದೇನೆ. ಶಂಕರ್‌ನಾಗ್ ನನಗೆ ಆದರ್ಶ’ ಎಂದರು. ಒರಟು ಹಳ್ಳಿ ಹುಡುಗನಾಗಿ ಧರ್ಮ ಕೀರ್ತಿರಾಜ್ ನಟಿಸಿದ್ದಾರೆ. ಕಾವ್ಯ ನಾಯಕಿ. ಸಾಧುಕೋಕಿಲ, ಬಲರಾಜವಾಡಿ, ಜಿ.ಜಿ.ಗೋವಿಂದೆಗೌಡ, ರವಿರೆಡ್ಡಿ, ಮಂಡ್ಯ ಸಿದ್ದು, ಮೂರ್ತಿ ಗಿರಿನಗರ, ಮಂಜು ಹೊನ್ನವಳ್ಳಿ ನಟಿಸಿದ್ದಾರೆ. ಡಾ.ಕಿರಣ್ ತೋಟಂಬೈಲ್ ಸಂಗೀತ, ವಿ.ಪಳನಿವೇಲು ಛಾಯಾಗ್ರಹಣವಿದೆ.