ಸಾರಾಂಶ
ಉಪೇಂದ್ರ ನಿರ್ದೇಶನ, ನಟನೆಯ ಯುಐ ಸಿನಿಮಾದ ಚೀಪ್ ಸಾಂಗ್ ಬಿಡುಗಡೆ
ಕನ್ನಡಪ್ರಭ ಸಿನಿವಾರ್ತೆ
ಉಪೇಂದ್ರ ನಿರ್ದೇಶನ, ನಟನೆಯ ‘ಯುಐ’ ಚಿತ್ರದ ‘ಚೀಪ್ ಸಾಂಗ್’ ಪ್ರೋಮೋ ಪ್ರೇಮಿಗಳ ದಿನದಂದು ಬಿಡುಗಡೆ ಆಗಿದೆ. ‘ನಂದು ತುಂಬ ದೊಡ್ಡದು. ಅವನಿಗಿಂತ ನಿಂದು ಚಿಕ್ಕದು. ನಿಂದು ತುಂಬ ಚಿಕ್ಕದು. ಇವನಿಗಿಂತ ಅವನದು ದೊಡ್ಡದು. ಎಲ್ಲ ಚೀಪ್ ಚೀಪ್...’ ಎಂಬ ಸಾಲಿನ ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ನಂಬರ್ 1 ಟ್ರೆಡಿಂಗ್ ಆಗಿದೆ.ಲಹರಿ ಫಿಲಂಸ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಉಪೇಂದ್ರ ಅವರೇ ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್, ನಕಾಶ್ ಅಜೀಜ್, ದೀಪಕ್ ಬ್ಲೂ ಧ್ವನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಇದೆ. ಚಿನ್ನಿ ಪ್ರಕಾಶ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಫೆಬ್ರವರಿ 26ಕ್ಕೆ ಪೂರ್ಣ ಹಾಡು ಬಿಡುಗಡೆಯಾಗಲಿದೆ. ಸದ್ಯ ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಹಾಡಿನ ಪ್ರೋಮೋ ಬಿಡುಗಡೆಯಾಗಿದೆ.
ಜಿ ಮನೋಹರನ್ ಮತ್ತು ಕೆ.ಪಿ ಶ್ರೀಕಾಂತ್ ಯುಐ ಸಿನಿಮಾದ ನಿರ್ಮಾಪಕರು. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.