ಸಾರಾಂಶ
ಎರಡು ವಾರದ ಕೆಳಗೆ ಈ ಸಿನಿಮಾದ ‘ತೋಬಾ ತೋಬಾ’ ಹಾಡು ಬಿಡುಗಡೆಯಾಗಿ ಎಷ್ಟೊಂದು ಫೇಮಸ್ ಆಗಿದೆ ಅಂದ್ರೆ ಅಂಬಾನಿ ಮಗನ ಮದುವೇಲೂ ಅದೇ ಹಾಡು, ಕಲಾಸಿಪಾಳ್ಯದ ಗಲ್ಲಿಯಲ್ಲೂ ಅದೇ ಹಾಡು.
ಸಿನಿವಾರ್ತೆ
ವಿಕ್ಕಿ ಕೌಶಲ್ ನಟನೆಯ ಬಾಲಿವುಡ್ ಸಿನಿಮಾ ‘ಬ್ಯಾಡ್ ನ್ಯೂಸ್’ ಈ ವಾರ ಬಿಡುಗಡೆ ಆಗುತ್ತಿದೆ. ಎರಡು ವಾರದ ಕೆಳಗೆ ಈ ಸಿನಿಮಾದ ‘ತೋಬಾ ತೋಬಾ’ ಹಾಡು ಬಿಡುಗಡೆಯಾಗಿ ಎಷ್ಟೊಂದು ಫೇಮಸ್ ಆಗಿದೆ ಅಂದ್ರೆ ಅಂಬಾನಿ ಮಗನ ಮದುವೇಲೂ ಅದೇ ಹಾಡು, ಕಲಾಸಿಪಾಳ್ಯದ ಗಲ್ಲಿಯಲ್ಲೂ ಅದೇ ಹಾಡು.
ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು, ಎಲ್ಲೆಲ್ಲೂ ‘ತೋಬಾ ತೋಬಾ’ ಹಾಡಿಗೆ ರೀಲ್ಸ್. ಸಲ್ಮಾನ್ ಖಾನ್, ಹೃತಿಕ್ ರೋಶನ್‌ರಿಂದ ಹಿಡಿದು ಸೆಲೆಬ್ರಿಟಿಗಳೂ ಈ ಹಾಡನ್ನು ಹೊಗಳೋರೇ. ಜೊತೆಗೆ ಈ ಹಾಡಿನಲ್ಲಿ ಬರುವ ವಿಕ್ಕಿ ಕೌಶಲ್‌ನ ಹುಕ್ ಸ್ಟೆಪ್ ಸಖತ್ ಟ್ರೆಂಡಿಂಗ್‌ನಲ್ಲಿದೆ. ಲಕ್ಷಾಂತರ ಜನ ರೀಲ್ಸ್ ಮಾಡಿದ್ದಾರೆ. ಕನ್ನಡದ ನಟಿಯರಾದ ರೀಷ್ಮಾ ನಾಣಯ್ಯ, ಶ್ವೇತಾ ಶ್ರೀವಾತ್ಸವ್ ಕೂಡ ಹುಕ್ ಸ್ಟೆಪ್ಸ್ ಹಾಕಿದ್ದಾರೆ. ಹಾಡು ರಿಲೀಸ್ ಆಗಿ 2 ವಾರ ಕಳೆದರೂ ಈ ಹಾಡು ನಂ.1 ಟ್ರೆಂಡಿಂಗ್‌ನಲ್ಲೇ ಇದೆ.
ವಿಕ್ಕಿ ಕೌಶಲ್, ತೃಪ್ತಿ ದಿಮ್ರಿ ಜೊತೆ ಸ್ಟೆಪ್ಸ್ ಹಾಕಿರೋ ಈ ಹಾಡನ್ನು ಕರಣ್ ಔಜ್ಲಾ ಬರೆದು ಕಂಪೋಸ್ ಮಾಡಿದ್ದಾರೆ.