ಸಾರಾಂಶ
ಸಿನಿವಾರ್ತೆ
ವಿಜಯ್ ರಾಘವೇಂದ್ರ ನಟನೆಯ ಹೊಸ ಚಿತ್ರ ‘ರಿಪ್ಪನ್ ಸ್ವಾಮಿ’ ಫಸ್ಟ್ ಲುಕ್ ಬಿಡುಗಡೆಯಾಗಿದೆ. ವಿಜಯ ರಾಘವೇಂದ್ರ ಅವರ ‘ಮಾಲ್ಗುಡಿ ಡೇಸ್’ ಸಿನಿಮಾ ನಿರ್ದೇಶನ ಮಾಡಿದ್ದ ಕಿಶೋರ್ ಮೂಡಬಿದ್ರೆ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಕತ್ತಿ ಹಿಡಿದು ನಿಂತಿರುವ ವಿಜಯ್ ರಾಘವೇಂದ್ರ ಗೆಟಪ್ ಕುತೂಹಲ ಹುಟ್ಟಿಸುವಂತಿದೆ.
ಈ ಸಿನಿಮಾ ಕುರಿತು ಕಿಶೋರ್ ಮೂಡಬಿದ್ರೆ, ‘ಸಣ್ಣ ಕೊಪ್ಪ ಎಂಬ ಒಂದು ಕಾಲ್ಪನಿಕ ಊರಿನಲ್ಲಿ ನಡೆಯುವ ಕತೆ. ಅಲ್ಲೊಂದು ಎಸ್ಟೇಟು. ಅಲ್ಲೊಬ್ಬ ವ್ಯಕ್ತಿ. ಅವನೇ ರಿಪ್ಪನ್ ಸ್ವಾಮಿ. ಆ ಪಾತ್ರವನ್ನು ವಿಜಯ ರಾಘವೇಂದ್ರ ಮಾಡುತ್ತಿದ್ದಾರೆ.
ಮಲೆನಾಡು ಎಂದಾಕ್ಷಣ ಸುಂದರ ಊರು ಎಂಬ ಕಲ್ಪನೆ ಮೂಡುತ್ತದೆ. ಜೊತೆಗೆ ಆ ಸೌಂದರ್ಯದಲ್ಲಿ ನಿಗೂಢತೆ ಕೂಡ ಅಡಗಿದೆ ಎಂಬುದು ಈ ಚಿತ್ರದ ಹಿನ್ನೆಲೆ. ಒಂದು ಎಸ್ಟೇಟಿನಲ್ಲಿ ನಡೆಯುವ ಆಗುಹೋಗು, ರಿಪ್ಪನ್ ಸ್ವಾಮಿ ಎಂಬ ವಿಶಿಷ್ಟ ವ್ಯಕ್ತಿಯ ಬದುಕು ಈ ಚಿತ್ರದ ಕಥಾ ಹಂದರ. ಕ್ರೈಂ ಥ್ರಿಲ್ಲರ್ ಶೈಲಿಯ ತಮಾಷೆಯಾಗಿ ಮುಂದೆ ಸಾಗುವ ಕತೆ ಇದು’ ಎನ್ನುತ್ತಾರೆ.
ಗೆಳೆಯರೆಲ್ಲಾ ಸೇರಿಕೊಂಡು ಪಂಚಾನನ ಎಂಬ ತಂಡ ಕಟ್ಟಿಕೊಂಡು ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಅಶ್ವಿನಿ ಚಂದ್ರಶೇಖರ್, ಪ್ರಕಾಶ್ ತುಮಿನಾಡು, ವಜ್ರಧೀರ್ ಜೈನ್ ತಾರಾಗಣದಲ್ಲಿದ್ದಾರೆ.