ಸಾರಾಂಶ
ದಾಸವರೇಣ್ಯ ಶ್ರೀ ವಿಜಯದಾಸರು’ ಸಿನಿಮಾದ ಎರಡನೇ ಭಾಗಕ್ಕೆ ಮುಹೂರ್ತ ನೆರವೇರಿದೆ. ತೇಜಸ್ವಿನಿ ಅನಂತಕುಮಾರ್ ಕ್ಯಾಮರಾಗೆ ಚಾಲನೆ ನೀಡಿದರು. ವಿದ್ವಾಂಸ ಡಾ. ಸತ್ಯಧ್ಯಾನಾಚಾರ್ಯ ಕಟ್ಟಿ ಆರಂಭ ಫಲಕ ತೋರಿಸಿದರು.
ಸಿನಿವಾರ್ತೆ : ದಾಸವರೇಣ್ಯ ಶ್ರೀ ವಿಜಯದಾಸರು’ ಸಿನಿಮಾದ ಎರಡನೇ ಭಾಗಕ್ಕೆ ಮುಹೂರ್ತ ನೆರವೇರಿದೆ. ತೇಜಸ್ವಿನಿ ಅನಂತಕುಮಾರ್ ಕ್ಯಾಮರಾಗೆ ಚಾಲನೆ ನೀಡಿದರು. ವಿದ್ವಾಂಸ ಡಾ. ಸತ್ಯಧ್ಯಾನಾಚಾರ್ಯ ಕಟ್ಟಿ ಆರಂಭ ಫಲಕ ತೋರಿಸಿದರು.
ನಿರ್ದೇಶಕ ಮಧುಸೂದನ್ ಹವಾಲ್ದಾರ್, ‘ನಾಲ್ಕು ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಹಂಪೆ, ಆನೆಗುಂದಿ, ಹುಲಗಿ, ಶ್ರೀರಂಗಪಟ್ಟಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ದಾಸರ ಕುರಿತ ಚಿತ್ರವಾದ ಕಾರಣ ಒಂಭತ್ತು ಹಾಡುಗಳಿರುತ್ತವೆ’ ಎಂದರು .
ನಿರ್ಮಾಪಕ ತ್ರಿವಿಕ್ರಮ ಜೋಷಿ ಸಿನಿಮಾದಲ್ಲಿ ವಿಜಯದಾಸರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ವಿಜಯದಾಸರ ಆರಾಧನಾ ಸಂದರ್ಭದಲ್ಲೇ ಚಿತ್ರದ ಎರಡನೇ ಭಾಗಕ್ಕೆ ಚಾಲನೆ ಸಿಕ್ಕಿದೆ. ಹರಿದಾಸರ ಕುರಿತಾಗಿ ಹತ್ತು ಸಿನಿಮಾಗಳನ್ನು ನಿರ್ಮಿಸುವ ಯೋಜನೆಯಿದೆ’ ಎಂದರು.
ಪ್ರಭಂಜನ ದೇಶಪಾಂಡೆ, ಶರತ್ ಜೋಶಿ, ಶ್ರೀಲತಾ ಬಾಗೇವಾಡಿ ಮುಖ್ಯಪಾತ್ರಗಳಲ್ಲಿದ್ದಾರೆ.