ಮಹಿಳಾ ಪ್ರಧಾನ ಚಿತ್ರ ಸುಮಾ ಮುಹೂರ್ತ

| Published : Apr 08 2024, 01:06 AM IST / Updated: Apr 08 2024, 06:03 AM IST

ಸಾರಾಂಶ

ಮಹಿಳಾ ಪ್ರಧಾನ ಸಿನಿಮಾ ಎನಿಸಿಕೊಂಡಿರುವ ಸುಮಾ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು.

 ಸಿನಿವಾರ್ತೆ

ಮಹಿಳಾ ಪ್ರಧಾನ ‘ಸುಮಾ’ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು. ಓಂ ಸಾಯಿ ಸಿನೆಮಾಸ್‌ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಹಿರಿಯ ನಟ, ನಿರ್ದೇಶಕ ರವಿಕಿರಣ್ ಕ್ಯಾಮರಾ ಸ್ವಿಚ್‌ ಆನ್‌ ಮಾಡಿದರೆ, ನಿರ್ಮಾಪಕ ಸಂಜಯ್‌ ಗೌಡ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು.

ರಶ್ಮಿ ಎಸ್‌ ಈ ಚಿತ್ರ ಬರೆದು ನಿರ್ದೇಶಿಸುತ್ತಿದ್ದಾರೆ. ಮೈಸೂರು ಮೂಲದ ಪ್ರದೀಪ್ ಗೌಡ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಬಾಲ ರಾಜವಾಡಿ, ರೇಣು ಶಿಕಾರಿ, ಮುರಳೀಧರ್‌ ಡಿ ಆರ್, ಕಾವ್ಯ ಪ್ರಕಾಶ್, ರೋಹಿಣಿ, ಸುನಂದ ಕಲಬುರ್ಗಿ, ರೇಣುಕುಮಾರ್ ಸಂಸ್ಥಾನ‌ ಮಠ , ಅವಿನಾಶ ಗಂಜೀಹಾಳ, ಶಿವಕುಮಾರ್‌ ಆರಾಧ್ಯ , ಹರಿಹರನ್ ಬಿ ಪಿ ತಾರಾಬಳಗದಲ್ಲಿದ್ದಾರೆ. ಶಂಖು, ನಟರಾಜ್‌ ಕ್ಯಾಮೆರಾ, ಛಾಯಾಗ್ರಹಣ, ಮುತ್ತುರಾಜ್ ಟಿ ಸಂಕಲನ, ಎನ್‌ ರಾಜು ಸಂಗೀತವಿದೆ.