ರಾಕಿಂಗ್‌ ಸ್ಟಾರ್‌ ಯಶ್ ನಟನೆಯ ‘ಟಾಕ್ಸಿಕ್‌’ಸಿನಿಮಾ ಮುಹೂರ್ತ : ಟೀಮ್‌ನ ಸೆಟ್‌ ಬಾಯ್ ಸುನೀಲ್ ಅವರಿಂದ ಮೊದಲ ದೃಶ್ಯಕ್ಕೆ ಕ್ಲ್ಯಾಪ್

| Published : Aug 09 2024, 12:32 AM IST / Updated: Aug 09 2024, 09:17 AM IST

ರಾಕಿಂಗ್‌ ಸ್ಟಾರ್‌ ಯಶ್ ನಟನೆಯ ‘ಟಾಕ್ಸಿಕ್‌’ಸಿನಿಮಾ ಮುಹೂರ್ತ : ಟೀಮ್‌ನ ಸೆಟ್‌ ಬಾಯ್ ಸುನೀಲ್ ಅವರಿಂದ ಮೊದಲ ದೃಶ್ಯಕ್ಕೆ ಕ್ಲ್ಯಾಪ್
Share this Article
  • FB
  • TW
  • Linkdin
  • Email

ಸಾರಾಂಶ

ಯಶ್ ನಟನೆಯ ಟಾಕ್ಸಿಕ್ ಸಿನಿಮಾಕ್ಕೆ ಕೊನೆಗೂ ಒಂದೊಳ್ಳೆ ದಿನ ಮುಹೂರ್ತ ಆಗಿದೆ.

ರಾಕಿಂಗ್‌ ಸ್ಟಾರ್‌ ಯಶ್ ನಟನೆಯ ‘ಟಾಕ್ಸಿಕ್‌’ಸಿನಿಮಾ ಕೊನೆಗೂ ಸೆಟ್ಟೇರಿದೆ. ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ನಿರ್ಮಿಸಲಾಗಿರುವ ಬೃಹತ್‌ ಸೆಟ್‌ನಲ್ಲೇ ಸಿನಿಮಾದ ಮುಹೂರ್ತ ನೆರವೇರಿದೆ.

ಮುಹೂರ್ತಕ್ಕೆ ಯಾವ ಸೆಲೆಬ್ರಿಟಿಗಳನ್ನೂ ಕರೆಸದೇ ಟೀಮ್‌ನ ಸೆಟ್‌ ಬಾಯ್ ಸುನೀಲ್ ಅವರಿಂದಲೇ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿಸಿದ್ದು ವಿಶೇಷವಾಗಿತ್ತು. ಬ್ರಾಹ್ಮೀ ಮುಹೂರ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಶ್‌, ನಿರ್ದೇಶಕಿ ಗೀತು ಮೋಹನ್‌ದಾಸ್‌, ನಿರ್ಮಾಪಕ ವೆಂಕಟ್‌ ನಾರಾಯಣ್‌ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಯಶ್‌ ಮೊದಲ ದಿನದಿಂದಲೇ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಖ್ಯಾತ ಹಾಲಿವುಡ್‌ ಸ್ಟಂಟ್‌ ಮಾಸ್ಟರ್‌ ಜೆಜೆ ಪೆರ್ರಿ ಈ ಸಿನಿಮಾದ ಸಾಹಸ ದೃಶ್ಯಗಳನ್ನು ಸಂಯೋಜಿಸಲಿದ್ದಾರೆ ಎನ್ನಲಾಗಿದೆ. ಅನೇಕ ಬಾಲಿವುಡ್‌ ಕಲಾವಿದರು ಈ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ.