ಏ.10ಕ್ಕೆ ಯಶ್‌ ಟಾಕ್ಸಿಕ್‌ ಬಿಡುಗಡೆ ಅನುಮಾನ

| Published : Jul 31 2024, 01:01 AM IST

ಸಾರಾಂಶ

ಯಶ್‌ ನಟನೆಯ ಟಾಕ್ಸಿಕ್‌ ಬಿಡುಗಡೆ ಏ.10ಕ್ಕೆ ಆಗಲ್ವೇನೋ ಅಂತ ಅಂದುಕೊಂಡವರ ಅನುಮಾನ ನಿಜ ಆಗಿದೆ.

ಕನ್ನಡಪ್ರಭ ಸಿನಿವಾರ್ತೆಯಶ್‌ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್‌’ ಏ.10ಕ್ಕೆ ಬಿಡುಗಡೆಯಾಗುವುದು ಅನುಮಾನ. ಶೂಟಿಂಗ್‌ ಶೆಡ್ಯೂಲ್‌ನಲ್ಲಿ ವ್ಯತ್ಯಯವಾದ ಕಾರಣ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ ಎಂಬುದು ಸದ್ಯದ ಸುದ್ದಿ. ಇದನ್ನು ದೃಢೀಪಡಿಸಿಕೊಂಡೇ ಏ.10ಕ್ಕೆ ಪ್ರಭಾಸ್‌ ಮತ್ತು ಟೀಮ್‌ ‘ದಿ ರಾಜಾ ಸಾಬ್‌’ ಸಿನಿಮಾ ಬಿಡುಗಡೆಯನ್ನು ಘೋಷಿಸಿದೆ. ಇನ್ನೊಂದೆಡೆ ಅಕ್ಷಯ್‌ ಕುಮಾರ್‌ ನಟನೆಯ ಬಾಲಿವುಡ್‌ ಸಿನಿಮಾ ‘ಜಾಲಿ ಎಲ್‌ಎಲ್‌ಬಿ 3’ ಅಂದೇ ತೆರೆಗೆ ಬರಲಿದೆ.

ವರ್ಷಗಳಿಂದ ಯಶ್‌ ಸಿನಿಮಾಕ್ಕೆ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಈ ಬೆಳವಣಿಗೆಗಳಿಂದ ಮತ್ತೊಮ್ಮೆ ನಿರಾಸೆಯಾಗಿದೆ.