ಸಾರಾಂಶ
ಯಶ್ ನಟನೆಯ ಟಾಕ್ಸಿಕ್ ಸಿನಿಮಾಕ್ಕಾಗಿಯೇ ಹೊಸ ಹೇರ್‌ಸ್ಟೈಲ್ ಮಾಡಲಾಗಿದೆಯಂತೆ.
ಅನಂತ್ ಅಂಬಾನಿ ವಿವಾಹದ ವೇಳೆ ಸಖತ್ ಟ್ರೆಂಡಿಂಗ್ ಆದ ಯಶ್ ಹೊಸ ಹೇರ್‌ಸ್ಟೈಲ್ ‘ಟಾಕ್ಸಿಕ್’ ಸಿನಿಮಾಗಾಗಿಯೇ ಮಾಡಿರುವ ಕೇಶವಿನ್ಯಾಸ ಎಂದು ಹೇರ್ ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಹೇಳಿದ್ದಾರೆ. ‘ಈ ಸ್ಟೈಲ್‌ಗೆ ಯಶ್ ಹೇಳಿರುವ ಟಾಕ್ಸಿಕ್ ಸಿನಿಮಾ ಸ್ಕ್ರಿಪ್ಟೇ ಸ್ಪೂರ್ತಿ’ ಎಂದೂ ತಿಳಿಸಿದ್ದಾರೆ.
‘ನನಗೆ ಟಾಕ್ಸಿಕ್ ಕಥೆ ವಿವರಿಸಿ ಅದಕ್ಕೆ ತಕ್ಕಂಥಾ ಸ್ಟೈಲ್ ಮಾಡಲು ಹೇಳಿದಾಗ ಇದಕ್ಕೆ ಅವರ ಈ ಹಿಂದಿನ ಲಾಂಗ್‌ಹೇರ್‌ಗಿಂತಲೂ ಶಾರ್ಟ್‌ಹೇರ್ ಕಟ್ ಚಂದ ಅಂತನಿಸಿತು. ಪೊಂಪಡೋರ್ ಹೇರ್‌ಸ್ಟೈಲ್ ಆ ಪಾತ್ರಕ್ಕೆ ಸೊಗಸಾಗಿ ಹೊಂದುತ್ತೆ ಅನಿಸಿ ಆ ಹೇರ್‌ಸ್ಟೈಲ್‌ನಲ್ಲೇ ಯಶ್ ಅವರನ್ನು ರೆಡಿ ಮಾಡಿದೆ. ಅವರು ಬಹಳ ಖುಷಿಯಲ್ಲಿ, ಅಲೆಕ್ಸ್ ಯೂ ಡಿಡ್ ಇಟ್ ಎಂದು ಹಗ್ ಮಾಡಿದರು’ ಎಂದು ಹೇಳಿದ್ದಾರೆ.