ಸಾರಾಂಶ
ಕೆಲ ದಿನಗಳ ಹಿಂದೆ, ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಹಾಗೂ ತಮಗೆ ಜನಿಸಿದ ಮಗುವಿಗೆ 5 ತಿಂಗಳು ತುಂಬಿದೆ ಎಂದು ಘೋಷಿಸಿದ್ದ ಅವರ ಗೆಳತಿ ಆಶ್ಲೇ ಕ್ಲೇರ್, ಇದೀಗ ಮಸ್ಕ್ ಪಿತೃತ್ವ ಪರೀಕ್ಷೆಗೆ ಒಳಗಾಗಬೇಕು ಎಂದು ದಾವೆ ಹೂಡಿದ್ದಾರೆ.
ವಾಷಿಂಗ್ಟನ್: ಕೆಲ ದಿನಗಳ ಹಿಂದೆ, ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಹಾಗೂ ತಮಗೆ ಜನಿಸಿದ ಮಗುವಿಗೆ 5 ತಿಂಗಳು ತುಂಬಿದೆ ಎಂದು ಘೋಷಿಸಿದ್ದ ಅವರ ಗೆಳತಿ ಆಶ್ಲೇ ಕ್ಲೇರ್, ಇದೀಗ ಮಸ್ಕ್ ಪಿತೃತ್ವ ಪರೀಕ್ಷೆಗೆ ಒಳಗಾಗಬೇಕು ಎಂದು ದಾವೆ ಹೂಡಿದ್ದಾರೆ.
ಮ್ಯಾನ್‌ಹಟ್ಟನ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಆಶ್ಲೇ, ‘2024ರ ಜನವರಿಯಲ್ಲಿ ಸೆಂಟ್ ಬಾರ್ತ್ಸ್‌ಗೆ ಭೇಟಿ ನೀಡಿದ್ದ ವೇಳೆ ತಾನು ಮಸ್ಕ್‌ರಿಂದಾಗಿ ಗರ್ಭ ಧರಿಸಿದ್ದೆ. ಇದನ್ನು ಧೃಡಪಡಿಸಲು ಅವರನ್ನು ಆನುವಂಶಿಕ ಪರೀಕ್ಷೆಗೆ ಒಳಪಡಿಸಬೇಕು’ ಎಂದು ಕೋರಿದ್ದಾರೆ.
ಜೊತೆಗೆ, ಮಗು ಜನಿಸಿದಾಗಿನಿಂದ ಮಸ್ಕ್ ಕೇವಲ 3 ಬಾರಿ ಅದನ್ನು ಭೇಟಿಯಾಗಿದ್ದಾರೆ. ಭದ್ರತಾ ದೃಷ್ಟಿಯಿಂದ ಕಂದನ ಜನನಪ್ರಮಾಣ ಪತ್ರದಲ್ಲಿ ತಂದೆಯ ಹೆಸರನ್ನು ಉಲ್ಲೇಖಿಸಿಲ್ಲ ಎಂದು ತಿಳಿಸಿದ್ದಾರೆ.
ಆದರೆ ಈವರೆಗೆ ಆಶ್ಲೇಗೆ ಜನಿಸಿದ ಮಗುವಿಗೆ ತಾನೇ ತಂದೆ ಎಂದು ಮಸ್ಕ್ ಬಹಿರಂಗವಾಗಿ ಒಪ್ಪಿಕೊಂಡಿಲ್ಲ.
ಕೆಲಸದ ವರದಿ ಕೊಡಿ, ಇಲ್ಲದಿದ್ದರೆ ವಜಾ: ಮಸ್ಕ್
ವಾಷಿಂಗ್ಟನ್: ಅಮೆರಿಕದ ಕಾರ್ಯಕ್ಷಮತೆ ವಿಭಾಗ(ಡಾಜ್)ದ ಮುಖ್ಯಸ್ಥರಾಗಿರುವ ಎಲಾನ್ ಮಸ್ಕ್, ಪ್ರತೀ ವಾರ ತಮ್ಮ ಕೆಲಸದ ವರದಿಯನ್ನು ಸಲ್ಲಿಸುವಂತೆ ಸರ್ಕಾರಿ ನೌಕರರಿಗೆ ಆದೇಶಿಸಿದ್ದಾರೆ. ಅಂತೆ ಮಾಡದಿದ್ದಲ್ಲಿ ಕೆಲಸದಿಂದ ವಜಾ ಮಾಡುವುದಾಗಿಯೂ ಎಚ್ಚರಿಸಿದ್ದಾರೆ.ಸರ್ಕಾರಿ ಕೆಲಸಗಾರರನ್ನು ಕಡಿಮೆಗೊಳಿಸಿ ಮತ್ತು ಮರುರೂಪಿಸುವ ಕಾರ್ಯವನ್ನು ಡಾಜ್ ಭರದಿಂದ ಮಾಡಬೇಕು ಎಂದು ಅದ್ಯಕ್ಷ ಟ್ರಂಪ್ ಟ್ರುತ್‌ನಲ್ಲಿ ಪೋಸ್ಟ್ ಮಾಡಿದ ಕೆಲ ಹೊತ್ತಿನಲ್ಲೇ ಈ ಬೆಳವಣಿಗೆಯಾಗಿದೆ.
ಭದ್ರತೆ ಮತ್ತು ವಿನಿಮಯ ಆಯೋಗ, ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳ ಉದ್ಯೋಗಿಗಳಿಗೆ, ತಾವು ಒಂದು ವಾರದಲ್ಲಿ ಮಾಡಿದ ಕೆಲಸದ ಸಾರಾಂಶವನ್ನು 5 ವಾಕ್ಯಗಳಲ್ಲಿ ತಿಳಿಸಲು ಸೂಚಿಸಲಾಗಿದೆ.ಪರಾಗ್‌ಗೂ ಹೀಗೇ ಮಾಡಿದ್ದರು;
3 ವರ್ಷಗಳ ಹಿಂದೆ ಟ್ವೀಟರ್‌ನ ಸಿಇಒ ಆಗಿದ್ದ ಭಾರತ ಮೂಲದ ಪರಾಗ್ ಅಗರ್ವಾಲ್ ಅವರ ಬಳಿಯೂ ಕೆಲಸ ವರದಿ ಕೇಳಲಾಗಿತ್ತು ಹಾಗೂ ಅವರು ಅದನ್ನು ಕೊಡದ ಕಾರಣ ವಜಾಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ.