ಹಿಂದೂಗಳು ಸೇಫ್ ಆಗಿದ್ದರೆ ಮುಸ್ಲಿಮರೂ ಸೇಫ್‌ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌

| N/A | Published : Mar 27 2025, 01:05 AM IST / Updated: Mar 27 2025, 04:43 AM IST

ram mandir yogi adithyanath

ಸಾರಾಂಶ

‘ಉತ್ತರ ಪ್ರದೇಶದಲ್ಲಿ ರಾಜ್ಯದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲಿಮರು ಕೂಡ ಸುರಕ್ಷಿತವಾಗಿ ಇರಲಿದ್ದಾರೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ನವದೆಹಲಿ: ‘ಉತ್ತರ ಪ್ರದೇಶದಲ್ಲಿ ರಾಜ್ಯದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲಿಮರು ಕೂಡ ಸುರಕ್ಷಿತವಾಗಿ ಇರಲಿದ್ದಾರೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಎಎನ್‌ಐಗೆ ಸಂದರ್ಶ ನೀಡಿದ ಅವರು ಹಿಂದೂಗಳ ಧಾರ್ಮಿಕ ಸಹಿಷ್ಣುತೆ ಬಗ್ಗೆ ಮಾತನಾಡುವ ವೇಳೆ ಈ ವಿಚಾರವನ್ನು ಪ್ರಸ್ತಾಪಿಸಿದರು.‘100 ಹಿಂದೂ ಕುಟುಂಬಗಳ ನಡುವೆ ಒಂದೇ ಮುಸ್ಲಿಂ ಕುಟುಂಬ ಇದ್ದರೂ ಅದು ಸುರಕ್ಷಿತವಾಗಿ ಇರಬಹುದು. ಆದರೆ 50 ಹಿಂದೂ ಕುಟುಂಬಗಳು 100 ಮುಸಲ್ಮಾನ ಕುಟುಂಬಗಳ ನಡುವೆ ಇರುವುದಕ್ಕೆ ಸಾಧ್ಯವಿಲ್ಲ. ಬಾಂಗ್ಲಾದೇಶ ಇದಕ್ಕೆ ಅತ್ಯುತ್ತಮ ಉದಾಹರಣೆ. ಇದಕ್ಕೂ ಮುನ್ನ ಪಾಕಿಸ್ತಾನವು ಉದಾಹರಣೆಯಾಗಿತ್ತು. ಅಪ್ಘಾನಿಸ್ತಾನದಲ್ಲಿ ಏನಾಯ್ತು? ಹೊಗೆ ಇದ್ದರೆ ಅಥವಾ ಯಾರಿಗಾದರೂ ಪೆಟ್ಟು ಬಿದ್ದರೆ, ನಮಗೆ ಪೆಟ್ಟು ಬೀಳುವ ಮುನ್ನ ನಾವು ಜಾಗರೂಕರಾಗಿರಬೇಕು. ಅದನ್ನೇ ನಾವು ನೋಡಿಕೊಳ್ಳಬೇಕು’ ಎಂದರು.

‘2017ರ ಬಳಿಕ ಉತ್ತರಪ್ರದೇಶದಲ್ಲಿ ಯಾವುದೇ ಕೋಮು ಗಲಭೆ ನಡೆದಿಲ್ಲ. ಇಲ್ಲಿ ಮುಸ್ಲಿಮರು ಕ್ಷೇಮವಾಗಿದ್ದಾರೆ. ಹಿಂದೂಗಳು ಸುರಕ್ಷಿತವಾಗಿದ್ದರೆ ಅವರು ಕೂಡ ಸುರಕ್ಷಿತ’ ಎಂದ ಅವರು, ’2017ಕ್ಕಿಂತ ಮೊದಲು ಉತ್ತರ ಪ್ರದೇಶದಲ್ಲಿ ಗಲಭೆಗಳು ನಡೆದಾಗ ಹಿಂದೂ ಅಂಗಡಿಗಳು ಉರಿಯುತ್ತಿದ್ದರೆ, ಮುಸ್ಲಿಂ ಅಂಗಡಿಗಳು ಸಹ ಉರಿಯುತ್ತಿದ್ದವು, ಹಿಂದೂ ಮನೆಗಳು ಉರಿಯುತ್ತಿದ್ದರೆ ಮುಸ್ಲಿಂ ಮನೆಗಳು ಸಹ ಉರಿಯುತ್ತಿದ್ದವು.’ ಎಂದರು.