ಮೈಕ್ರೋಸಾಫ್ಟ್‌ ಡೌನ್‌ ಬಗ್ಗೆ ಟ್ವೀಟರ್‌ನಲ್ಲಿ ಮೀಮ್‌ ಹಾಗೂ ಜೋಕ್‌ಗಳ ತಮಾಷೆಯ ಸುರಿಮಳೆ

| Published : Jul 20 2024, 12:45 AM IST / Updated: Jul 20 2024, 05:33 AM IST

microsoft issue

ಸಾರಾಂಶ

ಮೈಕ್ರೋಸಾಫ್ಟ್ ಕಾರ್ಯನಿರ್ವಹಣೆ ಸ್ಥಗಿತ ಆದ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವೀಟರ್‌ನಲ್ಲಿ ಮೀಮ್‌ ಹಾಗೂ ಜೋಕ್‌ಗಳನ್ನು ಟ್ವೀಟ್‌ ಮಾಡಿದ್ದಾರೆ.

ನವದೆಹಲಿ: ಮೈಕ್ರೋಸಾಫ್ಟ್ ಕಾರ್ಯನಿರ್ವಹಣೆ ಸ್ಥಗಿತ ಆದ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವೀಟರ್‌ನಲ್ಲಿ ಮೀಮ್‌ ಹಾಗೂ ಜೋಕ್‌ಗಳನ್ನು ಟ್ವೀಟ್‌ ಮಾಡಿದ್ದಾರೆ.

‘ಮೈಕ್ರೋಸಾಫ್ಟ್ ರಜೆಯ ಮೂಡ್‌ನಲ್ಲಿದೆ’ ಎಂದು ಹೆಚ್ಚಿನ ಜನ ಟ್ವೀಟ್‌ ಮಾಡಿದ್ದಾರೆ. ‘ಈಗ ಲಾಗ್ ಔಟ್ ಮಾಡಲು ದೃಢವಾದ ಕಾರಣವಿದೆ’ ಅನೇಕ ಟೆಕ್ಕಿಗಳು ತಮಾಷೆ ಮಾಡಿದ್ದಾರೆ.

ಇನ್ನು ಕೆಲವು ಜನರು, ‘ಮೈಕ್ರೋಸಾಫ್ಟ್‌ ಕ್ಲೌಡ್‌ ಮೇಲೆಯೇ ಟೆಕ್ಕಿಗಳು ಅವಲಂಬಿತರಾಗಿದ್ದು, ಅವರಿಗೆ ಶನಿವಾರ, ಭಾನುವಾರದ ಜತೆ ಹೆಚ್ಚುವರಿಯಾಗಿ ಶುಕ್ರವಾರದಿಂದಲೇ ವೀಕೆಂಡ್‌ ಆರಂಭವಾಗಿದೆ’ ಎಂದು ಜೋಕ್‌ ಮಾಡಿದ್ದಾರೆ.

==

ಮೈಕ್ರೋಸಾಫ್ಟ್‌ ಡೌನ್‌ ಬಗ್ಗೆ ಮಸ್ಕ್‌ ವ್ಯಂಗ್ಯದ ಟ್ವೀಟ್‌

ವಾಷಿಂಗ್ಟನ್‌: ಮೈಕ್ರೋಸಾಫ್ಟ್‌ ವ್ಯವಸ್ಥೆಯು ವಿಶ್ವಾದ್ಯಂತ ಡೌನ್‌ ಆದ ಬೆನ್ನಲ್ಲೇ ಟ್ವೀಟರ್ (ಎಕ್ಸ್) ಮಾಲೀಕ ಹಾಗೂ ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಅವರು ವ್ಯಂಗ್ಯದ ಟ್ವೀಟ್‌ಗಳನ್ನು ಮಾಡಿದ್ದಾರೆ.ಒಂದು ಟ್ವೀಟ್‌ನಲ್ಲಿ ಅವರು ಮೈಕ್ರೋಸಾಫ್ಟ್‌ ಅನ್ನು ‘ಮೈಕ್ರೋಹಾರ್ಡ್‌’ ಎಂದು ವ್ಯಂಗ್ಯವಾಡಿದ್ದಾರೆ.ಮತ್ತೊಂದು ಟ್ವೀಟ್‌ನಲ್ಲಿ ಅವರು, ನಗುವ ಎಮೋಜಿ ಹಾಕಿ, ‘ಉಳಿದೆಲ್ಲವೂ ಕ್ರ್ಯಾಶ್ ಆಗಿದ್ದರೂ, ಎಕ್ಸ್‌ ಇನ್ನೂ ಕಾರ್ಯನಿರ್ವಹಿಸುತ್ತಿದೆ’ ಎಂದಿದ್ದಾರೆ ಹಾಗೂ ಆರಾಮವಾಗಿ ಸಿಗರೇಟು ಸೇದುತ್ತ ಮಲಗಿರುವ ವ್ಯಕ್ತಿಯ ಚಿತ್ರ ಲಗತ್ತಿಸಿದ್ದಾರೆ.