ಟಿಎಂಸಿ ಸಂಸದೆ ಸುಶ್ಮಿತಾ ದೇವ್‌ ಬುಧವಾರ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ಟಿಎಂಸಿಗೆ ಭಾರೀ ಆಘಾತ ಎದುರಾಗಿದೆ. ಸಯೋನಿ ಘೋಷ್‌, ಶತ್ರುಘ್ನ ಸಿನ್ಹಾ, ಕ್ರಿಕೆಟಿಗ ಪಠಾಣ್‌ ಕೂಡ ಬಂಡೇಳುವ ಸಂಭವವಿದೆ.

- ವಿಲೀನಕ್ಕೆ ಸೋನಿಯಾ ಆಹ್ವಾನ । ದೀದಿಗೆ ಎಐಸಿಸಿ ಉಪಾಧ್ಯಕ್ಷ ಸ್ಥಾನ ಆಫರ್‌

- ಸೋಲು, ಪಕ್ಷಾಂತರದಿಂದ ತತ್ತರಿಸಿರುವ ಮಮತಾ ಘರ್‌ ವಾಪಸಿಗೆ ಒಲವು?

-

- ದೀದಿಗೆ ಎಐಸಿಸಿ ಉಪಾಧ್ಯಕ್ಷ ಸ್ಥಾನ: ಸೋನಿಯಾರಿಂದ ಆಫರ್‌- ಸೋಲು, ಪಕ್ಷಾಂತರದಿಂದ ತತ್ತರಿಸಿ ಘರ್‌ ವಾಪಸಿಗೆ ಒಲವು?

--

ಟಿಎಂಸಿ ಸಂಸದೆ

ಸುಶ್ಮಿತಾ ದೇವ್‌

ರಾಜೀನಾಮೆನವದೆಹಲಿ: ಟಿಎಂಸಿ ಸಂಸದೆ ಸುಶ್ಮಿತಾ ದೇವ್‌ ಬುಧವಾರ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ಟಿಎಂಸಿಗೆ ಭಾರೀ ಆಘಾತ ಎದುರಾಗಿದೆ. ಸಯೋನಿ ಘೋಷ್‌, ಶತ್ರುಘ್ನ ಸಿನ್ಹಾ, ಕ್ರಿಕೆಟಿಗ ಪಠಾಣ್‌ ಕೂಡ ಬಂಡೇಳುವ ಸಂಭವವಿದೆ.-

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿನ ಭಾರೀ ಹಿನ್ನಡೆ, ಆ ಬಳಿಕ ಕೇಂದ್ರ ಮತ್ತು ರಾಜ್ಯದಲ್ಲಿ ಪಕ್ಷದ ವಿಭಜನೆ ಬಳಿಕ ಮೂಲೆಗುಂಪಾಗಿರುವ ಮಾಜಿ ಮುಖ್ಯಮಂತ್ರಿ, ತೃಣಮೂಲಕ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮುಂದೆ ‘ಘರ್‌ ವಾಪ್ಸಿ’ಯ ಪ್ರಸ್ತಾಪವೊಂದನ್ನು ಕಾಂಗ್ರೆಸ್‌ ಇಟ್ಟಿದೆ ಎನ್ನಲಾಗಿದೆ. ಈ ವಾದಗಳಿಗೆ ಪೂರಕವೆಂಬಂತೆ ಮಂಗಳವಾರ ಸೋನಿಯಾ- ಮಮತಾ ಸುದೀರ್ಘ ಚರ್ಚೆ ನಡೆಸಿದ್ದರೆ, ಬುಧವಾರ ರಾಹುಲ್‌ ಗಾಂಧಿ ಮತ್ತು ಅಭಿಷೇಕ್‌ ಬ್ಯಾನರ್ಜಿ ಮಾತುಕತೆ ನಡೆಸಿದ್ದಾರೆ.

ಪಶ್ಟಿಮ ಬಂಗಾಳ ವಿಧಾನಸಭೆ ಚುನಾವಣೆ ಬಳಿಕ ತೃಣಮೂಲ ಕಾಂಗ್ರೆಸ್‌ನ ಆಂತರಿಕ ಕಚ್ಚಾಟ ಬೀದಿಗೆ ಬಂದಿದ್ದು, ಪಕ್ಷದ 80 ಶಾಸಕರಲ್ಲಿ 58ಕ್ಕೂ ಹೆಚ್ಚು ಮಂದಿ ಪಕ್ಷದ ನಾಯಕತ್ವದ ವಿರುದ್ಧ ಬಂಡೆದಿದ್ದಾರೆ. ಋತಬ್ರತಾ ಘೋಷ್‌ರನ್ನು ತಮ್ಮ ನಾಯಕ ಎಂದು ಘೋಷಿಸಿಕೊಂಡಿದ್ದಾರೆ. ಇನ್ನು ಸಂಸತ್ತಿನಲ್ಲೂ ಟಿಎಂಸಿಯ 28 ಸಂಸದರ ಪೈಕಿ 20 ಮಂದಿ ಭಿನ್ನಮತೀಯರು ಬಿಜೆಪಿಗೆ ಬೆಂಬಲ ನೀಡುವ ಘೋಷಣೆ ಮಾಡಿದ್ದಾರೆ. ಇದರಿಂದ ಕಂಗಾಲಾಗಿರುವ ಮಮತಾ ಬೆನ್ನಿಗೆ ನಿಲ್ಲಲು ಕಾಂಗ್ರೆಸ್‌ ಮುಂದೆ ಬಂದಿದೆ.

ಟಿಎಂಸಿಯನ್ನು ಕಾಂಗ್ರೆಸ್‌ನೊಂದಿಗೆ ವಿಲೀನ ಮಾಡುವಂತೆ ಖುದ್ದು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಆಫರ್‌ ನೀಡಿದ್ದು, ಮಮತಾ ಬ್ಯಾನರ್ಜಿ ಅವರಿಗೆ ಎಐಸಿಸಿ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡುವ ಹಾಗೂ ಅವರ ಅಳಿಯ ಅಭಿಷೇಕ್‌ ಬ್ಯಾನರ್ಜಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವ ಬಗ್ಗೆ ಚರ್ಚೆ ಆಗಿದೆ. ಆದರೆ, ಮಮತಾ ತಕ್ಷಣಕ್ಕೆ ಈ ಆಫರ್ ಒಪ್ಪಿಲ್ಲ, ಹಾಗಂತ ತಿರಸ್ಕರಿಸಿಯೂ ಇಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ, ಇದನ್ನು ಮಮತಾ ಆಗಲಿ, ಕಾಂಗ್ರೆಸ್‌ ಆಗಲಿ ಖಚಿತಪಡಿಸಿಲ್ಲ.

ಈ ನಡುವೆ ತಾವೇ ನಿಜವಾದ ಟಿಎಂಸಿ ಬಣ. ಆದರೆ ಬಿಜೆಪಿಯಲ್ಲಿ ವಿಲೀನದ ಯಾವುದೇ ಪ್ರಸ್ತಾಪ ಇಲ್ಲ ಎಂದು ಟಿಎಂಸಿ ಬಂಡಾಯ ಬಣದ ನಾಯಕ ಋತಬ್ರತಾ ಬ್ಯಾನರ್ಜಿ ಹೇಳಿದ್ದಾರೆ. ಇನ್ನೊಂದೆಡೆ ಮಮತಾ ಬಣದ ನಾಯಕರು ಕೂಡಾ ವಿಲೀನದ ಪ್ರಸ್ತಾಪ ತಳ್ಳಿಹಾಕಿದ್ದಾರೆ.

ಕಾಂಗ್ರೆಸ್‌ಗೇನು ಲಾಭ?:

ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಮಮತಾ ಬ್ಯಾನರ್ಜಿ ಆಗಮನದಿಂದ ರಾಜ್ಯದಲ್ಲಿ ಹೊಸ ಜೀವ ಬಂದಂತಾಗಲಿದೆ. ಅಲ್ಲದೆ, ಸಂಸತ್ತಿನಲ್ಲೂ ಪಕ್ಷದ ಸಂಖ್ಯಾಬಲ ಹೆಚ್ಚಾದಂತಾಗಲಿದೆ ಎಂಬ ಲೆಕ್ಕಾಚಾರ ಇದೆ.

ಕಾಂಗ್ರೆಸ್‌ ಮೂಲಕ ರಾಜಕಾರಣ:

ಮಮತಾ ಬ್ಯಾನರ್ಜಿ ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡವರು. 1991ರಲ್ಲಿ ಕಾಂಗ್ರೆಸ್‌ ನೇತೃತ್ವದ ನರಸಿಂಹ ರಾವ್‌ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಸಚಿವೆಯಾಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ, 1998ರಲ್ಲಿ ತೃಣಮೂಲ ಕಾಂಗ್ರೆಸ್‌ ಕಟ್ಟಿ 3 ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದರು.

ಕೈಬಲಪಡಿಸಲಷ್ಟೇ ದೀದಿಗೆ ಮನವಿ?:

ಮತ್ತೊಂದು ಮೂಲಗಳ ಪ್ರಕಾರ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಬುಧವಾರ ಸಭೆ ನಡೆಸಿದ್ದು, ಬಿಜೆಪಿ ವಿರುದ್ಧದ ಹೋರಾಟದಲ್ಲಿ ಕೈಜೋಡಿಸುವಂತೆ ದೀದಿಗೆ ಮನವಿ ಮಾಡಲಾಗಿದೆ. ಈ ವೇಳೆ ಕಾಂಗ್ರೆಸ್‌ ನೇತೃತ್ವದ ಇಂಡಿ ಒಕ್ಕೂಟದ ಪಕ್ಷಗಳು ಭಿನ್ನಮತ ಮರೆತು ಯಾವ ರೀತಿ ಒಗ್ಗಟ್ಟು ಪ್ರದರ್ಶಿಸಬೇಕೆಂಬ ಕುರಿತು ಚರ್ಚೆ ನಡೆದಿದೆ. ಮಮತಾಗೆ ಕಾಂಗ್ರೆಸ್‌ ಸೇರುವಂತೆ ಯಾವುದೇ ಆಫರ್‌ ನೀಡಿಲ್ಲ ಎನ್ನಲಾಗಿದೆ.